ದೇಶಲಾಕ್ ಡೌನ್ ಎಫೆಕ್ಟ್: ಕಳೆದ ನಾಲ್ಕು ತಿಂಗಳಲ್ಲಿ 60 ಲಕ್ಷ ವೈಟ್ ಕಾಲರ್ ಉದ್ಯೋಗ ನಷ್ಟ
ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶದಲ್ಲಿ ಜಾರಿಗೊಳಿಸಲಾಗಿದ್ದ ಲಾಕ್ ಡೌನ್ ಪರಿಣಾಮ ಕೇವಲ ನಾಲ್ಕು ತಿಂಗಳಲ್ಲಿ ದೇಶದಲ್ಲಿ 6.6 ಮಿಲಿಯನ್ ವೈಟ್ ಕಾಲರ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಭಾರತೀಯ ಆರ್ಥಿಕತೆ ಮೇಲ್ವಿಚಾರಣೆ ಕೇಂದ್ರ (ಸಿಎಂ ಐಇ) ತನ್ನ ವರದಿಯಲ್ಲಿ ತಿಳಿಸಿದೆ.