ದೇಶಜಮ್ಮು ಕಾಶ್ಮೀರದ ಸಮಸ್ಯೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ: ಸತ್ಯಪಾಲ್ ಮಲಿಕ್
ತಾನು ಈ ಹಿಂದೆ ಬಹಳವೇ ವಿವಾದಾತ್ಮಕವೂ, ಸಮಸ್ಯೆಗಳಿಂದ ಕೂಡಿದ ಸ್ಥಳವೊಂದರ ರಾಜ್ಯಪಾಲನಾಗಿಯೂ ಸಹ ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದು ಗೋವಾದ ನೂತನ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ಭಾನುವಾರ ಸತ್ಯಪಾಲ್ ಮಲಿಕ್ ಗೋವಾ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು.