ದೇಶತಾಯಿಯಾಗುವ ಆಯ್ಕೆಯಲ್ಲಿ ಮಹಿಳೆ ನಿರ್ಧಾರವೇ ಅಂತಿಮ: 33 ವಾರಗಳ ಗರ್ಭಿಣಿಯ ಗರ್ಭಪಾತಕ್ಕೆ ದೆಹಲಿ ಹೈಕೋರ್ಟ್ ಅಸ್ತು
ಭಾರತದ ಕಾನೂನು ಗರ್ಭಪಾತದ ಹಕ್ಕನ್ನು ಮಹಿಳೆಯರಿಗೆ ನೀಡುತ್ತದೆ. ಮಗುವಿಗೆ ಜನ್ಮ ನೀಡುವುದು, ಇನ್ನೂ ಜನ್ಮ ತಾಳದ ಮಗುವಿನ ಘನತೆಯ ಬದುಕಿನ ಸಾಧ್ಯತೆಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಹಕ್ಕು ತಾಯಿಯದ್ದೇ ಎಂದು ದೆಹಲಿ ಹೈಕೋರ್ಟ್ ಹೇಳಿದೆ.