ದೇಶಪಾಕಿಸ್ತಾನದ 27 ಲಾಂಚ್ ಪ್ಯಾಡ್ ಸಕ್ರಿಯ: ಭಾರತಕ್ಕೆ ನುಸುಳಲು ಸಿದ್ದವಾಗಿದ್ದಾರೆ 320 ಭಯೋತ್ಪಾದಕರು!
ಪಾಕಿಸ್ತಾನವು ನಿಯಂತ್ರಣ ರೇಖೆಯ ಉದ್ದಕ್ಕೂ 27 ಲಾಂಚ್ ಪ್ಯಾಡ್ಗಳನ್ನು ಸಕ್ರಿಯಗೊಳಿಸಿದ್ದು, ಅಲ್ಲಿ 320 ಕ್ಕೂ ಹೆಚ್ಚು ಭಯೋತ್ಪಾದಕರು ಭಾರತಕ್ಕೆ ನುಸುಳಲು ಕಾಯುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಹೆಚ್ಚಿದ ಒಳನುಸುಳುವಿಕೆ ಪ್ರಯತ್ನಗಳ ಬಗ್ಗೆ ಏಜೆನ್ಸಿಗಳು ಎಚ್ಚರಿಕೆ ನೀಡಿವೆ.