ರಾಜ್ಯಕರ್ತವ್ಯಕ್ಕೆ ಹಾಜರಾಗಲು 30 ಕಿ.ಮೀ. ಸೈಕಲ್ ತುಳಿಯುವ ಚಾಲಕ ಕಂ ನಿರ್ವಾಹಕ!
ಕೊರೊನಾದ ಈ ಕಾಲದಲ್ಲಿ ಎಷ್ಟೋ ಜನ ನೌಕರರು ತಮ್ಮ ಮನೆಯಿಂದ ಕಚೇರಿ ತಲುಪಲು ಬಸ್ ಇಲ್ಲ ಎನ್ನುವ ಕಾರಣಕ್ಕೆ ಕೆಲಸಕ್ಕೆ ಹಾಜರಾಗಲ್ಲ. ಇಂಥವರ ಮಧ್ಯೆ ಯಲಬುರ್ಗಾ ಕೆಎಸ್ಆರ್ಟಿಸಿ ಘಟಕದ ಚಾಲಕ ಕಂ ನಿರ್ವಾಹಕ ನೀಲಪ್ಪ ಎಚ್. 30 ಕಿಮೀ ಸೈಕಲ್ ತುಳಿದು ಕೆಲಸಕ್ಕೆ ಹಾಜರಾಗುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.