ರಾಜ್ಯಜೈಲಿನಲ್ಲಿರುವ ನಟ ದರ್ಶನ್ ಗೆ ವಿಡಿಯೊ ಕಾಲ್: ರೌಡಿಶೀಟರ್ ಸತ್ಯ ಪೊಲೀಸ್ ವಶಕ್ಕೆ, ಪ್ರಕರಣ ತನಿಖೆಗೆ 3 ವಿಶೇಷ ತಂಡ
ನಟ ದರ್ಶನ್ಗೆ ರೌಡಿಶೀಟರ್ ಸತ್ಯ ವಿಡಿಯೋ ಕಾಲ್ ಮಾಡಿದ್ದು ಆ ವಿಡಿಯೋ ವೈರಲ್ ಆಗಿ ಸಂಚಲನ ಸೃಷ್ಟಿಸಿ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ, ಭ್ರಷ್ಟಾಚಾರಗಳ ಬಗ್ಗೆ ವ್ಯಾಪಕವಾಗಿ ಸಾರ್ವಜನಿಕ ಚರ್ಚೆಯಾಗುತ್ತಿದೆ. ಜೈಲಿನ ನಿಯಮ ಉಲ್ಲಂಘಿಸಿದ 9 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.