ದೇಶಕೇರಳ: ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಗೆ 29 ದಿನಗಳ ನಂತರ ವಕ್ಕರಿಸಿತು ಕೊರೋನಾ, ಆರೋಗ್ಯ ತಜ್ಞರಿಗೆ ಶಾಕ್!
ಕೊವಿಡ್-19 ಶಂಕಿತ ವ್ಯಕ್ತಿಗಳಿಗೆ 28 ದಿನಗಳ ಕ್ವಾರಂಟೈನ್ ಸಾಕು. 28 ದಿನಗಳ ನಂತರ ವೈರಸ್ ಪ್ರಸರಣವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ನಂಬಿದೆ. ಆದರೆ ಕೇರಳದಲ್ಲಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬರಿಗೆ 29ನೇ ದಿನ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಆರೋಗ್ಯ ತಜ್ಞರೇ ತಬ್ಬಿಬ್ಬುಗೊಳ್ಳುವಂತೆ ಮಾಡಿದೆ.