ದೇಶತಿಮ್ಮಪ್ಪನಿಗೆ ಮುಡಿ ಅರ್ಪಿಸಿದ ಅನಂತ್ ಅಂಬಾನಿ: ದೇವಸ್ಥಾನಕ್ಕೆ 27 ಕೋಟಿ ಮೌಲ್ಯದ 25 ಎಲೆಕ್ಟ್ರಿಕ್ ಬಸ್ ದಾನ ಮಾಡುವುದಾಗಿ ಘೋಷಣೆ!
ಭಾನುವಾರ ಬೆಳಿಗ್ಗೆ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಕ್ತಿ ಮತ್ತು ಸೇವೆಯ ವಿಶಿಷ್ಟ ಸಂಗಮ ಕಂಡುಬಂದಿತು. ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ತಿಮ್ಮಪ್ಪನ ದರ್ಶನ ಪಡೆದು ದೇವಾಲಯ ಆಡಳಿತಕ್ಕಾಗಿ ಮಹತ್ವದ ಘೋಷಣೆ ಮಾಡಿದರು.