ವಿಶೇಷ'ವಿಶ್ವ ಯೂತ್ ಸ್ಕ್ರ್ಯಾಬಲ್ ಚಾಂಪಿಯನ್'ನಲ್ಲಿ ಸಾಧನೆಗೈದ ಬೆಂಗಳೂರಿನ ಪುಟ್ಟ ಬಾಲಕ ಸಮರ್ಥ್ ಮಂಚಾಲಿ!
ಪದ ಜೋಡಣೆ ಆಟಗಳಲ್ಲಿ ಭಾರತೀಯರು ನಿಸ್ಸೀಮರು ಎಂಬುದು ಇಡೀ ವಿಶ್ವಕ್ಕೆ ಗೊತ್ತಿರುವ ವಿಚಾರ. ಭಾರತದ ಮಕ್ಕಳು ಮತ್ತು ಹದಿಹರೆಯದವರು ಹಲವಾರು ಸ್ಪೆಲ್ಲಿಂಗ್ ಬೀ ಸ್ಪರ್ಧೆಗಳಲ್ಲಿ ನಿರಂತರವಾಗಿ ಪ್ರಾಬಲ್ಯ ಸಾಧಿಸಿರುವುದೇ ಇದಕ್ಕೆ ಉದಾಹರಣೆ. ಇದೀಗ ಈ ಪಟ್ಟಿಗೆ ಸ್ಕ್ರ್ಯಾಬಲ್ ಆಟ ಕೂಡ ಸೇರಿಕೊಂಡಿದೆ.