ವಾಣಿಜ್ಯ2000 ರೂ. ಮುಖಬೆಲೆಯ ಶೇ 97.26 ರಷ್ಟು ನೋಟು ಬ್ಯಾಂಕುಗಳಿಗೆ ವಾಪಸ್; 9,760 ಕೋಟಿ ರೂ. ಇನ್ನೂ ಸಾರ್ವಜನಿಕರ ಬಳಿ!
ಚಲಾವಣೆಯಲ್ಲಿದ್ದ 2,000 ರೂ. ಮುಖಬೆಲೆಯ ನೋಟುಗಳ ಪೈಕಿ ಶೇ 97.26 ರಷ್ಟು ನೋಟುಗಳು ಬ್ಯಾಂಕುಗಳಿಗೆ ಮರಳಿವೆ ಮತ್ತು ಸುಮಾರು 9,760 ಕೋಟಿ ರೂಪಾಯಿ ಮೌಲ್ಯದ ನೋಟುಗಳು ಇನ್ನೂ ಸಾರ್ವಜನಿಕರ ಬಳಿ ಇವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶುಕ್ರವಾರ ತಿಳಿಸಿದೆ.