ದೇಶಭಾರತೀಯ ರೈಲ್ವೆ: ಶೀಘ್ರವೇ 200 ವಂದೇ ಭಾರತ್ ಸ್ಲೀಪರ್ ರೈಲು ಆರಂಭ
ವಂದೇ ಭಾರತ್ ಸ್ಲೀಪರ್ ರೈಲುಗಳ ರೇಕ್ ನ್ನು ಸಿಮ್ಯುಲೇಶನ್ ಪರೀಕ್ಷೆಗಾಗಿ ಹೊರತರಲಾಗಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 200 ಅಂತಹ ರೈಲುಗಳನ್ನು ಪರಿಚಯಿಸುವ ವಿಶಾಲ ಯೋಜನೆಯ ಭಾಗವಾಗಿ 10 ಸ್ಲೀಪರ್ ರೈಲುಗಳ ಉತ್ಪಾದನೆಯು ಪ್ರಸ್ತುತ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದರು.