ವಿದೇಶಅಂದು ಆರ್ಥಿಕ ಮಹಾಕುಸಿತ, ಇಂದು ಕೊರೋನಾ-ನಿರುದ್ಯೋಗ ಸಮಸ್ಯೆಯಿಂದ ತತ್ತರಿಸಿದ ದೊಡ್ಡಣ್ಣ ಅಮೆರಿಕಾ!
ಅಮೆರಿಕಾದಲ್ಲಿ 1930 ರ ಮಹಾ ಆರ್ಥಿಕ ಕುಸಿತದ ನಂತರದಲ್ಲಿ ಇದೇ ಮೊದಲ ಬಾರಿಗೆ ನಿರುದ್ಯೋಗ ಸಮಸ್ಯೆ ಅತ್ಯಂತ ಹೆಚ್ಚಾಗಿ ಕಾಣಿಸಿದೆ. ಕೊರೋನಾವೈರಸ್ ಹಾವಳಿಯ ಕಾರಣ ಅಮೆರಿಕಾದಲ್ಲಿ 6 ಮಂದಿಯಲ್ಲಿ ಒಬ್ಬನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಆರ್ಥಿಕ ಬಿಕ್ಕಟ್ಟಿನ ಕಾರಣ ಅಮೆರಿಕಾ ಸಂಸತ್ತು ಸುಮಾರು 500 ಶತಕೋಟಿ ಡಾಲರ್ ವೆಚ್ಚದ ಪ್ಯಾಕೇಜ್ ಅನ್ನು ಅಂಗೀಕರಿಸಿದೆ.