ರಾಜ್ಯಹಾವೇರಿ: 185 ಕೆಜಿ ತೂಕದ ಮಹಿಳೆಗೆ ಶಸ್ತ್ರ ಚಿಕಿತ್ಸೆ ನಡೆಸಿ ಪ್ರಾಣ ಉಳಿಸಿದ ಸರ್ಕಾರಿ ಆಸ್ಪತ್ರೆ ವೈದ್ಯರು!
ಹಾವೇರಿ ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡವೊಂದು 185 ಕೆಜಿ ತೂಕದ 48 ವರ್ಷದ ಮಹಿಳೆಯೊಬ್ಬರಿಗೆ ಅಪರೂಪದ ಕರುಳಿನ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಅವರ ಜೀವವನ್ನು ಉಳಿಸಿದ್ದಾರೆ. ಈ ಶಸ್ತ್ರ ಚಿಕಿತ್ಸೆ ಕಷ್ಟ ಎಂದು ಹೇಳಿ ಅನೇಕ ಚಿಕಿತ್ಸೆ ನೀಡಲು ಅನೇಕ ಖಾಸಗಿ ಆಸ್ಪತ್ರೆಗಳು ಕೈ ಚೆಲ್ಲಿದ ನಂತರ ಸರ್ಕಾರಿ ವೈದ್ಯರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.