ರಾಜ್ಯಮಲೆಮಹಾದೇಶ್ವರ ಬೆಟ್ಟ: ದೀಪಾವಳಿ ಜಾತ್ರೆಯಲ್ಲಿ ಸಂಗ್ರಹವಾಯ್ತು ಬರೋಬ್ಬರಿ 1.71 ಕೋಟಿ ಕಾಣಿಕೆ
ಶ್ರೀಕ್ಷೇತ್ರದಲ್ಲಿ ನಡೆಯುವ ದೀಪಾವಳಿ ಜಾತ್ರೆಗಳಲ್ಲೇ ಸಂಗ್ರಹವಾಗಿರುವ ಅತಿ ಹೆಚ್ಚಿನ ಕಾಣಿಕೆ ಇದಾಗಿದೆ. ಶಿವರಾತ್ರಿ ಜಾತ್ರೆಯಲ್ಲಿ 2 ಕೋಟಿ ರೂ., ಯುಗಾದಿ ಜಾತ್ರೆಯಲ್ಲಿ 1.95 ಕೋಟಿ ರೂ.,ಕಾಣಿಕೆ ಸಂಗ್ರಹದ ದಾಖಲೆ ಹೊಂದಿದ್ದು ದೀಪಾವಳಿ ಜಾತ್ರೆಯಲ್ಲಿ ಇದೇ ಹೆಚ್ಚಿನ ಸಂಗ್ರಹ ಮೊತ್ತವಾಗಿದೆ ಎಂದು ಮೂಲಗಳು ತಿಳಿಸಿವೆ.