ಗುಜರಾತ್: ಪ್ರಧಾನಿ ಮೋದಿಯಿಂದ ಸರ್ದಾರ್ ಸರೋವರ ಅಣೆಕಟ್ಟೆ ದೇಶಕ್ಕೆ ಸಮರ್ಪಣೆ
ಪ್ರಧಾನಿ ನರೇಂದ್ರ ಮೋದಿ ತಮ್ಮ 67ನೇ ಜನ್ಮದಿನದ ಸಂದರ್ಭದಲ್ಲಿ ಸರ್ದಾರ್ ಸರೋವರ್ ಅಣೆಕಟ್ಟೆಯನ್ನು ದೇಶಕ್ಕೆ ಸಮರ್ಪಿಸಿದರು.
Published On :
ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ತಮ್ಮ 67ನೇ ಜನ್ಮದಿನದ ಸಂದರ್ಭದಲ್ಲಿ ಸರ್ದಾರ್ ಸರೋವರ್ ಅಣೆಕಟ್ಟೆಯನ್ನು ದೇಶಕ್ಕೆ ಸಮರ್ಪಿಸಿದರು.
ದಶಕಗಳ ಕಾಲ ಹಲವು ಏಳು-ಬೀಳುಗಳನ್ನು ಕಂಡ ಸರ್ದಾರ್ ಅಣೆಕಟ್ಟೆ ಗೆ ಇಂದು ಉದ್ಘಾಟನೆ ಭಾಗ್ಯ ಒದಗಿಬಂದಿದೆ.
ಈ ಅಣೆಕಟ್ಟೆ ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳನ್ನು ತರಲಿದೆ. 4.73 ದಶಲಕ್ಷ ಎಕರೆ ಅಡಿ (ಎಂ.ಎಫ್.ಎ) ಬಳಕೆಗೆ ಅರ್ಹವಾದ ಜಲ ಸಂಗ್ರಹಣೆಗಾಗಿ ಈ ಅಣೆಕಟ್ಟೆಯ ಎತ್ತರವನ್ನು ಇತ್ತೀಚೆಗೆ 138.68 ಅಡಿಗಳಿಗೆ ಎತ್ತರಿಸಲಾಗಿತ್ತು. ಇದರಿಂದ ಗುಜರಾತ್, ರಾಜಾಸ್ಥಾನ, ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರದ ರೈತರಿಗೆ ಲಾಭವಾಗಲಿದೆ.
ಯೋಜನೆಯು ನರ್ಮದಾ ನದಿಯ ನೀರನ್ನು ಗುಜರಾತ್ ರಾಜ್ಯದ ನೀರಿನ ಕೊರತೆ ಇರುವ ಪ್ರದೇಶಗಳಿಗೆ ವಿಸ್ತೃತ ಕಾಲುವೆ ಮತ್ತು ಕೊಳವೆ ಜಾಲದ ಮೂಲಕ ಹರಿಸಲು ನೆರವಾಗುತ್ತದೆ. ಯೋಜನೆಯಿಂದ 10 ಲಕ್ಷ ರೈತರಿಗೆ ನೀರಾವರಿ ಸೌಲಭ್ಯ ದೊರಕಲಿದೆ ಮತ್ತು ವಿವಿಧ ನಗರ ಮತ್ತು ಪಟ್ಟಣಗಳ 4 ಕೋಟಿಯಷ್ಟು ಜನರಿಗೆ ಕುಡಿಯುವ ನೀರಿನ ಸೌಲಭ್ಯವೂ ದೊರಕುವ ನಿರೀಕ್ಷೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್ಪ್ರಧಾನಿ ನರೇಂದ್ರ ಮೋದಿGujaratPrime Minister Narendra ModiSardar Sarovar DamCongress leader Gaurav GogoiSardar Sarovar Dam inaugurationಕಾಂಗ್ರೆಸ್ ನಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

