ಶಿವಪಾಲ್ ಬಣ ಗಂಭೀರವಲ್ಲ ಎಂದ ಸಮಾಜವಾದಿ ಪಕ್ಷದ ರಾಮ್ ಗೋಪಾಲ್
ಜೂನ್ ೮ ರಂದು ಜಾತ್ಯತೀತ ಪಕ್ಷಗಳ ಹೊಸ ಮೈತ್ರಿ ಬಣವನ್ನು ಸ್ಥಾಪಿಸುವುದಾಗಿ ಘೋಷಿಸಿರುವ ದಾಯಾದಿ ಶಿವಪಾಲ್ ಸಿಂಗ್ ಯಾದವ್ ವಿರುದ್ಧ ತೊಡೆ ತಟ್ಟಿರುವ ಸಮಾಜವಾದಿ ಪಕ್ಷದ ಮುಖಂಡ

Published On :
ಲಖನೌ: ಜೂನ್ ೮ ರಂದು ಜಾತ್ಯತೀತ ಪಕ್ಷಗಳ ಹೊಸ ಮೈತ್ರಿ ಬಣವನ್ನು ಸ್ಥಾಪಿಸುವುದಾಗಿ ಘೋಷಿಸಿರುವ ದಾಯಾದಿ ಶಿವಪಾಲ್ ಸಿಂಗ್ ಯಾದವ್ ವಿರುದ್ಧ ತೊಡೆ ತಟ್ಟಿರುವ ಸಮಾಜವಾದಿ ಪಕ್ಷದ ಮುಖಂಡ ರಾಮ್ ಗೋಪಾಲ್ ಯಾದವ್ ಗುರುವಾರ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಏತಾವಹ್ ನಲ್ಲಿ ವರದಿಗಾರರೊಂದಿಗೆ ಮಾತನಾಡಿದ ರಾಮ್ ಗೋಪಾಲ್ ಯಾದವ್ , ಹೊಸ ಪಕ್ಷ ಕಟ್ಟುವುದು ಮತ್ತು ಅದರ ಬೇರುಗಳನ್ನು ಬೆಳೆಸುವುದು ಏನೆಂದು ಶಿವಪಾಲ್ ಯಾದವ್ ಗೆ ಗೊತ್ತಿಲ್ಲ. "ಶಿವಪಾಲ್ ಗಾಳಿಯಲ್ಲಿ ತೇಲುತ್ತಿದ್ದಾರೆ" ಎಂದಿದ್ದಾರೆ.
ಒಂದು ಪಕ್ಷ ಅವರು ಹೊಸ ಬಣವನ್ನು ಸ್ಥಾಪಿಸಿದರು ಅದು ಸಮಾಜವಾದಿ ಪಕ್ಷದ ಹತ್ತಿರಕ್ಕೂ ನಿಲುಕುವದಿಲ್ಲ ಎಂದು ಕೂಡ ರಾಜ್ಯಸಭಾ ಸದಸ್ಯ ಹೇಳಿದ್ದಾರೆ.
"ಸಮಾಜವಾದಿ ಪಕ್ಷದ ೯೮% ಕಾರ್ಯಕರ್ತರು ಮತ್ತು ಮುಖಂಡರು ಅಖಿಲೇಶ್ ಯಾದವ್ ಜೊತೆಗಿದ್ದಾರೆ" ಎಂದು ಅವರು ಹೇಳಿದ್ದು, ಮುಲಾಯಂ ಸಿಂಗ್ ಯಾದವ್ ಅವರಿಗೆ ಅವಮಾನ ಮಾಡಲಾಗಿದೆ ಮತ್ತು ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಆರೋಪವನ್ನು ಅಲ್ಲಗೆಳೆದಿದ್ದಾರೆ.
"ಕುಟುಂಬದಲ್ಲಿ ಇರುವ ಎಲ್ಲರೂ ಮತ್ತು ಸಮಾಜವಾದಿ ಪಕ್ಷದ ಪ್ರತಿಯೊಬ್ಬನು ನೇತಾಜಿಯನ್ನು ಗೌರವಿಸುತ್ತಾರೆ" ಎಂದು ಕೂಡ ಅವರು ಹೇಳಿದ್ದಾರೆ.
ತಮ್ಮ ತಂದೆ ಮತ್ತು ದಾಯಾದಿ ಜೊತೆಗೆ ಅಧಿಕಾರದ ಹಗ್ಗಜಗ್ಗಾಟದಲ್ಲಿ ಅಖಿಲೇಶ್ ಜೊತೆಗಿದ್ದ ಮತ್ತು ಅವರ ನಿಕಟವರ್ತಿ ಎನ್ನಲಾದ ರಾಮ್ ಗೋಪಾಲ್ ಯಾದವ್, ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಯದೆ ಇರುವುದಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮೇಲೆಯೂ ವಾಗ್ದಾಳಿ ನಡೆಸಿದ್ದಾರೆ.
"ಯೋಗಿ ಆದಿತ್ಯನಾಥ್ ಇದರಲ್ಲಿ ಸಂಪೂರ್ಣ ಅನನುಭವಿ, ಅವರಿಗೆ ದೊಡ್ಡ ರಾಜ್ಯವನ್ನು ಹೇಗೆ ಆಳಬೇಕು ಎಂಬುದೇ ಗೊತ್ತಿಲ್ಲ ಮತ್ತು ಇದರ ಫಲವಾಗಿ ಇಂದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಉತ್ತರಪ್ರದೇಶದಲ್ಲಿ ಆಡಳಿತವೇ ಇಲ್ಲ" ಎಂದು ಅವರು ದೂರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸಮಾಜವಾದಿ ಪಕ್ಷSamajwadi PartyAkhilesh YadavRam Gopal Yadavರಾಮ್ ಗೋಪಾಲ್ ಯಾದವ್Shivpal Singh Yadavಶಿವಪಾಲ್ ಸಿಂಗ್ ಯಾದವ್\"ಯೋಗಿ ಆದಿತ್ಯನಾಥ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


