ಪ್ರಧಾನ ಸುದ್ದಿ

ರಾಮ ದೇವಸ್ಥಾನ ನಿರ್ಮಾಣವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಸಾಕ್ಷಿ ಮಹಾರಾಜ್

ಅಯೋಧ್ಯೆಯಲ್ಲಿ ಅತಿ ದೊಡ್ಡ ರಾಮಮಂದಿರದ ನಿರ್ಮಾಣವನ್ನು ಭೂಮಿಯ ಮೇಲಿನ ಯಾವ ಶಕ್ತಿಗೂ ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡ ಸಾಕ್ಷಿ ಮಹಾರಾಜ್ ಮಂಗಳವಾರ ಹೇಳಿದ್ದು,

ರಾಮ ದೇವಸ್ಥಾನ ನಿರ್ಮಾಣವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಸಾಕ್ಷಿ ಮಹಾರಾಜ್
ಬಿಜೆಪಿ ಮುಖಂಡ ಸಾಕ್ಷಿ ಮಹಾರಾಜ್
Published On :
ಲಖನೌ: ಅಯೋಧ್ಯೆಯಲ್ಲಿ ಅತಿ ದೊಡ್ಡ ರಾಮಮಂದಿರದ ನಿರ್ಮಾಣವನ್ನು ಭೂಮಿಯ ಮೇಲಿನ ಯಾವ ಶಕ್ತಿಗೂ ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡ ಸಾಕ್ಷಿ ಮಹಾರಾಜ್ ಮಂಗಳವಾರ ಹೇಳಿದ್ದು, ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ಮುಂದೆ ಹಾಜರಾಗುತ್ತಿರುವುದಕ್ಕೆ ತಾವು ಅದೃಷ್ಟವಂತರೆಂದು ತಿಳಿಸಿದ್ದಾರೆ.
ವಿಚಾರಣೆಗೆ ನ್ಯಾಯಾಲಯಕ್ಕೆ ಬಂದ ಮೇಲೆ "ಭೂಮಿಯ ಮೇಲಿನ ಯಾವ ಶಕ್ತಿಗು ಅಯೋಧ್ಯೆಯಲ್ಲಿ ಅತಿ ದೊಡ್ಡ ರಾಮಮಂದಿರದ ನಿರ್ಮಾಣವನ್ನು ತಡೆಯಲು ಸಾಧ್ಯವಿಲ್ಲ" ಎಂದಿದ್ದಾರೆ. 
"ನಾನು ಯಾವುದೇ ತಪ್ಪು ಎಸಗಿಲ್ಲ. ಆದರೆ ಅದರ ಭಾಗವಾಗಿದ್ದಕ್ಕೆ ನಾನು ಅದೃಷ್ಟವಂತ ಮತ್ತು ಅದು ಧರ್ಮಶ್ರದ್ಧೆಯ ಕೆಲಸವಾಗಿತ್ತು" ಎಂದು ಕೂಡ ಅವರು ಹೇಳಿದ್ದಾರೆ. 
ಅಯೋದ್ಯೆಯನ್ನು ಮಸೀದಿಗಾಗಿ ನೆನಪಿಸಿಕೊಳ್ಳಬಾರದು ಬದಲಿಗೆ ರಾಮನ ಹುಟ್ಟಿದ ಸ್ಥಳವಾಗಿ ನೆನಪಿಸಿಕೊಳ್ಳಬೇಕು ಎಂದು ಭಾರತೀಯ ಜನತಾ ಪಕ್ಷದ ಮುಖಂಡ ಹೇಳಿದ್ದಾರೆ. 
"ಹುಚ್ಚರಾಗಬೇಡಿ. ಅಲ್ಲಿ ಬಾಬ್ರಿ ಮಸೀದಿ ಇರಲಿಲ್ಲ. ಬಾಬ್ರಿ ವಿದೇಶಿಗ ಮತ್ತು ಅವನಿಗೂ ಭಾರತಕ್ಕೂ ಸಂಬಂಧವಿಲ್ಲ. ನೀವು (ಮಾಧ್ಯಮದವರು) ಅದನ್ನು ಮತ್ತೆ ಮತ್ತೆ ಬಾಬ್ರಿ ಎಂದು ಕರೆಯುತ್ತೀರಿ. ಅದು ಅಂದು ಮತ್ತು ಇಂದು ರಾಮ ಜನ್ಮಭೂಮಿ ಮತ್ತು ಹಾಗೆಯೇ ಉಳಿಯುತ್ತದೆ" ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ. 
ಮಸೀದಿ ಧ್ವಂಸದಲ್ಲಿ ತಮ್ಮ ಕೈವಾಡವಿತ್ತೇ ಎಂಬ ಪ್ರಶ್ನೆಗೆ "ಅಲ್ಲಿ ಸಣ್ಣ ರಾಮ ದೇವಸ್ಥಾನದ ಹೊರತು ಬೇರೆ ಯಾವುದೇ ಕಟ್ಟಡ ಇರಲಿಲ್ಲ" ಎಂದು ಉತ್ತರಪ್ರದೇಶದ ಉನ್ನಾವೋ ಸಂಸದ ಹೇಳಿದ್ದಾರೆ. 
ಸಾಕ್ಷಿ ಮಹಾರಾಜ್ ಜೊತೆಗೆ ಹಿರಿಯ ಬಿಜೆಪಿ ಮುಖಂಡರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಕೇಂದ್ರ ಸಚಿವೆ ಉಮಾ ಭಾರತಿ ನ್ಯಾಯಾಲಯದ ಮುಂದೆ ಇಂದು ಹಾಜರಾಗಲಿದ್ದು, ಸಿಬಿಐ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.