ಪ್ರಧಾನ ಸುದ್ದಿ

ಕೇರಳ ಬೀಫ್ ಔತಣಕೂಟ ಖಂಡಿಸಿ ರಾಹುಲ್ ಗಾಂಧಿ ಅವರಿಗೆ ಕರೆ ಮಾಡಿದ ಹಿಂದೂ ಮುಖಂಡ

ಕೇರಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ಗೋಮಾಂಸ ಔತಣಕೂಟವನ್ನು ಖಂಡಿಸಿರುವ ಹಿಂದೂ ಮುಖಂಡ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇದರ ಬಗ್ಗೆ ಕಾಂಗ್ರೆಸ್

ಕೇರಳ ಬೀಫ್ ಔತಣಕೂಟ ಖಂಡಿಸಿ ರಾಹುಲ್ ಗಾಂಧಿ ಅವರಿಗೆ ಕರೆ ಮಾಡಿದ ಹಿಂದೂ ಮುಖಂಡ
ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ
Published On :
ಚಮೋಲಿ (ಉತ್ತರಾಖಂಡ್): ಕೇರಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ಗೋಮಾಂಸ ಔತಣಕೂಟವನ್ನು ಖಂಡಿಸಿರುವ ಹಿಂದೂ ಮುಖಂಡ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇದರ ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿರುವುದಾಗಿ ಹೇಳಿದ್ದಾರೆ. 
ಸದ್ಯಕ್ಕೆ ಜೋಷಿಮಠದಲ್ಲಿ ತಂಗಿರುವ ಈ ಸನ್ಯಾಸಿ ವರದಿಗಾರರೊಂದಿಗೆ ಮಾತನಾಡಿ ಗೋಹತ್ಯೆ ಭಾರತೀಯ ಸಂಸ್ಕೃತಿಗೆ ವಿರುದ್ಧ ಎಂದಿದ್ದಾರೆ.
ಈ ವಿಷಯವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿಯೊಂದಿಗೆ ಮಾತನಾಡಿದ್ದು, ನಮ್ಮ ಭಾವನೆಗಖನ್ನು ಅವರಿಗೆ ತಿಳಿಸಿದ್ದೇನೆ ಎಂದು ಕೂಡ ಅವರು ಹೇಳಿದ್ದಾರೆ. 
ರಾಜಕೀಯ ವಿಷಯಗಳಲ್ಲಿ ಶಂಕರಾಚಾರ್ಯ ಕಾಂಗ್ರೆಸ್ ಪಕ್ಷಕ್ಕ ನಿಕಟ ಎಂದೇ ಪರಿಗಣಿಸಲಾಗುತ್ತದೆ. ತಪ್ಪು ಮಾಡಿರುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಭರವಸೆ ನನಗೆ ಸಿಕ್ಕಿದೆ ಎಂದು ಕೂಡ ಅವರು ತಿಳಿಸಿದ್ದಾರೆ.
ಲಖನೌ ನಲ್ಲಿ ವಿಚಾರಣೆಯಲ್ಲಿರುವ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ, ಅಲ್ಲಿ ಮಸೀದಿಯೇ ಇರಲಿಲ್ಲ ಬದಲಾಗಲಿ ಅಲ್ಲಿ ರಾಮ, ಸೀತೆ ಮತ್ತು ಹನುಮಾನ್ ದೇವಾಲಯಗಳು ಇದ್ದವು, ಇಂದಿಗೂ ಇವೆ ಮತ್ತು ಅವುಗಳ ಪಳೆಯುಳಿಕೆಗಳು ಕೂಡ ಸಿಕ್ಕಿವೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.