ಪ್ರಧಾನ ಸುದ್ದಿ

ಎಫ್ ಐ ಪಿ ಬಿ ನಿರ್ಧಾರದ ಮೇಲೆ ನನ್ನ ಪುತ್ರ ಪ್ರಭಾವ ಬೀರಿಲ್ಲ: ಚಿದಂಬರಂ

ತಮ್ಮ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಮತ್ತು ಇ.ಡಿ ಪ್ರಕರಣ ದಾಖಲಿಸಿರುವುದರ ವಿರುದ್ಧ ಮಾತನಾಡಿರುವ ಮಾಜಿ ವಿತ್ತ ಸಚಿವ ಪಿ ಚಿದಂಬರಂ, ವಿದೇಶಿ ಹೂಡಿಕೆ ಅಭಿವೃದ್ಧಿ ಮಂಡಳಿಗೆ (ಎಫ್ ಐ ಪಿ

ಎಫ್ ಐ ಪಿ ಬಿ ನಿರ್ಧಾರದ ಮೇಲೆ ನನ್ನ ಪುತ್ರ ಪ್ರಭಾವ ಬೀರಿಲ್ಲ: ಚಿದಂಬರಂ
ಪಿ ಚಿದಂಬರಂ
Published On :
ನವದೆಹಲಿ: ತಮ್ಮ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಮತ್ತು ಇ.ಡಿ ಪ್ರಕರಣ ದಾಖಲಿಸಿರುವುದರ ವಿರುದ್ಧ ಮಾತನಾಡಿರುವ ಮಾಜಿ ವಿತ್ತ ಸಚಿವ ಪಿ ಚಿದಂಬರಂ, ವಿದೇಶಿ ಹೂಡಿಕೆ ಅಭಿವೃದ್ಧಿ ಮಂಡಳಿಗೆ (ಎಫ್ ಐ ಪಿ ಬಿ) ಸಂಬಂಧಿಸಿದ ಯಾವುದೇ ಅಧಿಕಾರಿಯನ್ನು ಭೇಟಿ ಮಾಡಿಲ್ಲ ಮತ್ತು ಭ್ರಷ್ಟ ಅಥವಾ ಕಾನೂನುಬಾಹಿರವಾಗಿ ಸಮಿತಿಯ ಮೇಲೆ ಪ್ರಭಾವ ಬೀರಿಲ್ಲ ಎಂದು ಸೋಮವಾರ ಹೇಳಿದ್ದಾರೆ. 
"ನನ್ನ ಜೊತೆಗೆ ಕೆಲಸ ಮಾಡಿದವರಿಗೆ ತಿಳಿದಿರುತ್ತದೆ, ನನ್ನ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಧೈರ್ಯ ಯಾರು ಮಾಡುತ್ತಿರಲಿಲ್ಲ. ನನ್ನೊಂದಿಗಾಗಲಿ ಅಥವಾ ಸಚಿವಾಲಯದ ಯಾವುದೇ ಅಧಿಕಾರಿಯೊಂದಿಗಾಗಲಿ ಇಂತಹ ನಿರ್ಧಾರಗಳ ಬಗ್ಗೆ ಮಾತನಾಡಲು ನನ್ನ ಯಾವುದೇ ಕುಟುಂಬದ ಸದಸ್ಯನಿಗೆ ಅವಕಾಶ ನೀಡಿರಲಿಲ್ಲ" ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. 
"ನನಗೆ ಗೊತ್ತಿದ್ದಂತೆ ಅಥವಾ ಗೊತ್ತಿಲ್ಲದೇ ಆಗಲಿ ಆರು ಕಾರ್ಯದರ್ಶಿಗಳಿದ್ದ ಎಫ್ ಐ ಪಿ ಬಿ ಜೊತೆಗೆ ನನ್ನ ಯಾವುದೇ ಕುಟುಂಬ ಸದಸ್ಯರು ಭ್ರಷ್ಟತೆಯಿಂದ ಅಥವಾ ಕಾನೂನುಬಾಹಿರವಾಗಿ ಸಂಪರ್ಕ ಸಾಧಿಸಿ ಪ್ರಭಾವ ಬೀರಿದ್ದಾರೆ ಎಂದು ಹೇಳುವುದು ಅಸಂಬದ್ಧ. ಇದು ಎಫ್ ಐ ಪಿ ಬಿಯ ಆರು ಸರ್ಕಾರಿ ಅಧಿಕಾರಿಗಳ ಮೇಲೆ ಮಾಡಿರುವ ತಪ್ಪಿನಿಂದ ಕೂಡಿರುವ ನಿಂದನಾತ್ಮಕ ಆರೋಪ" ಎಂದು ಕೂಡ ಚಿದಂಬರಂ ಹೇಳಿದ್ದಾರೆ. 
ಎಫ್ ಐ ಪಿ ಬಿ ಪ್ರಕರಣಗಳಿಗೆ ಸಂಬಂಧಿಸಿದಂತೆ, ಎಫ್ ಐ ಪಿ ಬಿ ಅನುಮೋದಿಸಿದ ಮತ್ತು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ನನ್ನ ಮುಂದಿಟ್ಟ ಯೋಜನೆಗಳನ್ನಷ್ಟೇ ಒಪ್ಪಿಗೆ ನೀಡಿರುವುದು ಎಂದು ಕೂಡ ಅವರು ಹೇಳಿದ್ದಾರೆ. 
ತಮ್ಮ ತಂದೆ ಸಚಿವರಾಗಿದ್ದಾಗ ಎಫ್ ಐ ಪಿ ಬಿ ಪ್ರಸ್ತಾವನೆಯ ಮಾಧ್ಯಮ ಸಂಸ್ಥೆ ಐ ಎನ್ ಎಕ್ಸ್ ಲಿಮಿಟೆಡ್ ಗೆ ಪರವಾನಗಿ ಪಡೆಯಲು ಪುತ್ರ ಕಾರ್ತಿ ಚಿದಂಬರಂ ೩.೫ ಕೋಟಿ ಆರ್ಥಿಕ ಲಾಭ ಪಡೆದಿದ್ದಾರೆ ಎಂದು ದೂರಿ ಚಿದಂಬರಂ ಅವರ ಚೆನ್ನೈ, ದೆಹಲಿ ಮತ್ತು ಇತರ ನಿವಾಸಗಳ ಮೇಲೆ ಮೇ ೧೬ ರಂದು ಸಿಬಿಐ ದಾಳಿ ನಡೆಸಿತ್ತು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.