ರಾಷ್ಟ್ರಪತಿ ಚುನಾವಣೆ ವಿಷಯದಲ್ಲಿ ವಿಪಕ್ಷಗಳಲ್ಲಿ ಒಗ್ಗಟ್ಟಿದೆ: ನಿತೀಶ್ ಕುಮಾರ್
ರಾಷ್ಟ್ರಪತಿ ಚುನಾವಣೆ ವಿಷಯದಲ್ಲಿ ವಿರೋಧಪಕ್ಷಗಳ ಒಗ್ಗಟ್ಟು ಹಾಗೆಯೇ ಇದೆ ಎಂದು ಸ್ಪಷ್ಟಪಡಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಅವರನ್ನು ಭೇಟಿ

Published On :
ನವದೆಹಲಿ: ರಾಷ್ಟ್ರಪತಿ ಚುನಾವಣೆ ವಿಷಯದಲ್ಲಿ ವಿರೋಧಪಕ್ಷಗಳ ಒಗ್ಗಟ್ಟು ಹಾಗೆಯೇ ಇದೆ ಎಂದು ಸ್ಪಷ್ಟಪಡಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಅವರನ್ನು ಭೇಟಿ ಮಾಡುವ ಗೌರವಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಭಾಗಿಯಾಗಿದ್ದಾಗಿ ತಿಳಿಸಿದ್ದಾರೆ.
"ರಾಷ್ಟ್ರಪತಿ ಚುನಾವಣೆ ವಿಷಯದಲ್ಲಿ ವಿಪಕ್ಷಗಳಲ್ಲಿ ಒಗ್ಗಟ್ಟಿದೆ" ಎಂದು ಪ್ರಧಾನಿಯವರನ್ನು ಭೇಟಿ ಮಾಡಿದ ನಂತರ ನಿತೀಶ್ ಕುಮಾರ್ ಮಾಧ್ಯಮಗಳಿಗೆ ಹೇಳಿದ್ದಾರೆ.
ಶುಕ್ರವಾರ ವಿರೋಧ ಪಕ್ಷಗಳ ನಾಯಕರಿಗೆ ಸೋನಿಯಾ ಗಾಂಧಿ ಅವರು ಆಯೋಜಿಸಿದ್ದ ಔತಣಕೂಟದ ಜೊತೆಗೆ, ಪ್ರಧಾನ ಮಂತ್ರಿಯವರು ಆಯೋಜಿಸಿದ್ದ ಔತಣಕೂಟಕ್ಕೆ ಹೋಲಿಸುವುದು ಸರಿಯಲ್ಲ ಎಂದಿರುವ ಜೆಡಿಯು ಮುಖಂಡ ವಿಪಕ್ಷಗಳ ಸಭೆಗೆ ಸಂಯುಕ್ತ ಜನತಾದಳದ ಮುಖಂಡ ಶರದ್ ಯಾದವ್ ಭೇಟಿ ನೀಡಿದ್ದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
"ಮಾರಿಷಸ್ ನ ಅರ್ಧದಷ್ಟು ಜನಸಂಖ್ಯೆ ಬಿಹಾರ ಮೂಲದವರು. ಮಾರಿಷಸ್ ಜೊತೆಗೆ ನಮಗೆ ಭಾವನಾತ್ಮಕ ಸಂಬಂಧ ಇದೆ ಆದುದರಿಂದ ಈ ಆಹ್ವಾನ ಒಪ್ಪಿಕೊಳ್ಳುವುದು ಸರಿ ಎಂದೆನಿಸಿತು" ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಶುಕ್ರವಾರ ವಿಪಕ್ಷಗಳ ಸಭೆಗೆ ಹಾಜರಾಗದ ಬಗ್ಗೆ ಪ್ರಶ್ನಿಸಿದಾಗ "ಇವೆರಡಕ್ಕೂ ಏನು ಸಂಬಂಧ ಇದೆ? ನಾನು ಏಪ್ರಿಲ್ ೨೦ರಂದೇ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದೇನೆ.
"ಶರದ್ ಯಾದವ್ ಅವರು ಈ ಸಭೆಗೆ ಹೋಗುವುದಾಗಿ ಮೊದಲೇ ನಿಶ್ಚಯವಾಗಿತ್ತು. ಇಂದಿನ ಸಭೆಯ ಆಹ್ವಾನ ಬಿಹಾರದ ಮುಖ್ಯಮಂತ್ರಿಯವರಿಗೆ ಬಂದಿತ್ತು" ಎಂದು ಕೂಡ ಅವರು ಹೇಳಿದ್ದಾರೆ.
"ಈ ಎರಡು ಸಭೆಗಳನ್ನು ಹೋಲಿಕೆ ಮಾಡುತ್ತಿರುವುದರಿಂದ ಪರಿಸ್ಥಿತಿಯ ಗೊಂದಲ ಸೃಷ್ಟಿಯಾಗಿದೆ" ಎಂದು ಕೂಡ ಅವರು ಹೇಳಿದ್ದಾರೆ.
ಮುಂಗಾರು ಮಳೆಗೂ ಮುಂಚೆ ರಾಜ್ಯದಲ್ಲಿ ಪ್ರವಾಹದ ಪರಿಸ್ಥಿತಿ ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನು ಕಳುಹಿಸಿಕೊಡುವಂತೆ ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಿರುವುದಾಗಿಯೂ ನಿತೀಶ್ ಹೇಳಿದ್ದಾರೆ.
ಬಿಹಾರಕ್ಕೆ ವಿಶೇಷ ಅನುದಾನ ನೀಡಲು ಕೋರಿ ಪತ್ರವನ್ನು ಪ್ರಧಾನಿ ಅವರಿಗೆ ನಿತೀಶ್ ನೀಡಿದ್ದಾರೆ. "ನಮಗೆ ಜನಾದೇಶ ಇದೆ. ನಮ್ಮಲ್ಲಿ ಮಹಾಘಟಬಂಧನ ಇದೆ. ಕೇಂದ್ರದ ಬಳಿ ರಾಜ್ಯದ ಸಮಸ್ಯೆಗಳನ್ನು ಎತ್ತುವುದು ನಮ್ಮ ಕರ್ತವ್ಯ" ಎಂದು ಕೂಡ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿನಿತೀಶ್ ಕುಮಾರ್Nitish Kumarರಾಷ್ಟ್ರಪತಿ ಚುನಾವಣೆpresidential pollPravind Jugnauthಪ್ರವಿಂದ್ ಜುಗ್ನೌತ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


