ಪ್ರಧಾನ ಸುದ್ದಿ

ಪಾಕಿಸ್ತಾನ 'ಒಂದು ಮೃತ್ಯು ಕೂಪ': ಭಾರತಕ್ಕೆ ಮರಳಿದ ನಂತರ ಉಜ್ಮಾ ಹೇಳಿಕೆ

ಪಾಕಿಸ್ತಾನದಲ್ಲಿ ಗನ್ ತೋರಿಸಿ ತನ್ನನ್ನು ಬಲವಂತದಿಂದ ಮದುವೆಯಾಗಲಾಗಿತ್ತು ಎಂದು ಆರೋಪಿದ್ದ ಭಾರತೀಯ ಮಹಿಳೆ....

ಪಾಕಿಸ್ತಾನ 'ಒಂದು ಮೃತ್ಯು ಕೂಪ': ಭಾರತಕ್ಕೆ ಮರಳಿದ ನಂತರ ಉಜ್ಮಾ ಹೇಳಿಕೆ
ಸುಷ್ಮಾ ಸ್ವರಾಜ್ - ಉಜ್ಮಾ ಅಹ್ಮದ್
Published On :
ನವದೆಹಲಿ: ಪಾಕಿಸ್ತಾನದಲ್ಲಿ ಗನ್ ತೋರಿಸಿ ತನ್ನನ್ನು ಬಲವಂತದಿಂದ ಮದುವೆಯಾಗಲಾಗಿತ್ತು ಎಂದು ಆರೋಪಿಸಿದ್ದ ಭಾರತೀಯ ಮಹಿಳೆ ಉಜ್ಮಾ ಅಹ್ಮದ್ ಗುರುವಾರ ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದು, ಇದಕ್ಕಾಗಿ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಪಾಕಿಸ್ತಾನ ಒಂದು ಸಾವಿನ ಬಲೆ ಎಂದು ಹೇಳಿದ್ದಾಳೆ.
ಇಂದು ವಾಘಾ ಗಡಿ ಮೂಲಕ ತಾಯಿನಾಡಿಗೆ ಮರಳಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಉಜ್ಮಾ, ಪಾಕಿಸ್ತಾನಕ್ಕೆ ಹೋಗುವುದು ಸುಲಭ. ಆದರೆ ಆ ಸಾವಿನ ಬಲೆಯಿಂದ ತಪ್ಪಿಸಿಕೊಂಡು ಬರುವುದು ಅಷ್ಟು ಸುಲಭವಲ್ಲ. ಅಲ್ಲಿ ಮಹಿಳೆಯರು ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಪ್ರತಿ ಮನೆಯಲ್ಲೂ ಒಬ್ಬ ಪುರುಷ ಇಬ್ಬರು, ಮೂವರು, ಇನ್ನು ಕೆಲವರು ನಾಲ್ವರು ಮಹಿಳೆಯರನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದಾಳೆ.
ಮಾಧ್ಯಮಗಳ ಮುಂದೆ ತನ್ನ ಕಹಿ ನೆನಪನ್ನು ಬಿಚ್ಚಿಟ್ಟ ಉಜ್ಮಾ, ನಾನು ಪ್ರೀತಿಯಿಂದಲೇ ಪಾಕಿಸ್ತಾನದ ನನ್ನ ಸ್ನೇಹಿತ ತಾಹಿರ್ ನನ್ನು ನೋಡಲು ಹೋಗಿದ್ದೆ. ಆದರೆ, ಅಲ್ಲಿ ನನ್ನನ್ನು ಹೀನಾಯವಾಗಿ ನಡೆಸಿಕೊಳ್ಳಲಾಯಿತು. ಬಲವಂತವಾಗಿ ನನ್ನನ್ನು ತಾಹಿರ್ ಗೆ ಮದುವೆ ಮಾಡಲಾಯಿತಲ್ಲದೆ, ನನ್ನನ್ನು ಹೊಡೆದು, ಬಡಿದು ಹಿಂಸಿಸಲಾಯಿತು ಎಂದು ಆರೋಪಿಸಿದ್ದಾಳೆ.
ಇದೇ ತಿಂಗಳು ಪಾಕಿಸ್ತಾನದಲ್ಲಿ ತಮ್ಮನ್ನು ಗನ್ ಪಾಯಿಂಟ್ ನಡಿ ಪಾಕಿಸ್ತಾನದ ಯುವಕನೊಬ್ಬನಿಗೆ ಮದುವೆ ಮಾಡಿಕೊಟ್ಟಿದ್ದಾಗಿ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಧೂತಾವಾಸ ಕಚೇರಿಗೆ ದೂರು ಸಲ್ಲಿಸಿದ್ದ ಉಜ್ಮಾ, ಇದೀಗ ಅಲ್ಲಿನ ಕಾನೂನು ಸಮರ ಗೆದ್ದು ಭಾರತಕ್ಕೆ ಹಿಂದಿರುಗಿದ್ದಾಳೆ.
ತಾಹಿರ್ ಜತೆಗೆ ಪ್ರೇಮಾಂಕುರವಾಗಿದ್ದು ನಿಜವಾದರೂ, ಆತನನ್ನು ನೋಡಿಕೊಂಡು ಬರಲು ನಾನು ಪಾಕಿಸ್ತಾನಕ್ಕೆ ಹೋಗಿದ್ದೆ. ಆದರೆ, ಅಲ್ಲಿ ಆತ ನನ್ನನ್ನು ಬಲವಂತವಾಗಿ ಮದುವೆ ಮಾಡಿಕೊಳ್ಳಲು ಮುಂದಾದ. ನಾನು ಪ್ರತಿಭಟಿಸಿದ್ದಕ್ಕೆ ನನ್ನನ್ನು ಹೊಡೆದು ಹಿಂಸಿಸಲಾಯಿತು. ಕೊಲ್ಲುವ ಬೆದರಿಕೆಯನ್ನೂ ಒಡ್ಡಲಾಯಿತು ಎಂದು ತಿಳಿಸಿದ್ದಾರೆ.
ಮೊದಲಿಗೆ ತನಗೆ ಮದುವೆಯಾಗಿಲ್ಲ ಎಂದು ಹೇಳಿದ್ದ ತಾಹಿರ್ ಗೆ ಈ ಮೊದಲೇ ಮದುವೆಯಾಗಿ ಆತನಿಗೆ ನಾಲ್ಕು ಜನ ಮಕ್ಕಳಿದ್ದಾರೆಂಬ ಸತ್ಯ ನನಗೆ ಅಲ್ಲಿಗೆ ಹೋದಾಗಲೇ ಗೊತ್ತಾಗಿದ್ದು ಎಂದು ಉಜ್ಮಾ ಹೇಳಿದ್ದಾಳೆ.
ಇನ್ನು ಸುಷ್ಮಾ ಸ್ವರಾಜ್ ಸಹ ಉಜ್ಮಾ ಅವರನ್ನು ಭಾರತಕ್ಕೆ ಸ್ವಾಗತಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.