ಗೋವು ಕಳ್ಳಸಾಗಾಣಿಕೆ ಶಂಕಿಸಿ ಪ್ರಾಣಿ ಆಂಬ್ಯುಲೆನ್ಸ್ ವಶಪಡಿಸಿಕೊಂಡ ಗಜಿಯಾಬಾದ್ ಪೊಲೀಸರು
ಕಾಲು ಮುರಿದಿದ್ದ ಕರುವನ್ನು ಧೌಲಾನಾದ ಆಸ್ಪತ್ರೆಗೆ ಸಾಗಿಸುತ್ತಿದ್ದ ಪೀಪಲ್ ಫಾರ್ ಅನಿಮಲ್ಸ್ (ಪಿ ಎಫ್ ಎ) ಸಂಸ್ಥೆಯ ಆಂಬ್ಯುಲೆನ್ಸ್ ಅನ್ನು ಗೋವು ಕಳ್ಳಸಾಗಾಣಿಕೆ ವಾಹನ ಎಂದು ಶಂಕಿಸಿ

Published On :
ಗಜಿಯಾಬಾದ್: ಕಾಲು ಮುರಿದಿದ್ದ ಕರುವನ್ನು ಧೌಲಾನಾದ ಆಸ್ಪತ್ರೆಗೆ ಸಾಗಿಸುತ್ತಿದ್ದ ಪೀಪಲ್ ಫಾರ್ ಅನಿಮಲ್ಸ್ (ಪಿ ಎಫ್ ಎ) ಸಂಸ್ಥೆಯ ಆಂಬ್ಯುಲೆನ್ಸ್ ಅನ್ನು ಗೋವು ಕಳ್ಳಸಾಗಾಣಿಕೆ ವಾಹನ ಎಂದು ಶಂಕಿಸಿ ಅತ್ಯುತ್ಸಾಹಿ ಗಜಿಯಾಬಾದ್ ಪೊಲೀಸರು ಅದನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
"ಕಸಾಯಿಖಾನೆಗೆ ಹಸುಗಳನ್ನು ಸಾಗಿಸುವ ಕಳ್ಳ ಸಾಗಾಣಿಕೆದಾರರನ್ನು ಹಿಡಿಯುವ ಅತ್ಯುತ್ಸಾಹಿ ಪೊಲೀಸರು, ಮೇಲೆ ನೀಲಿ ದೀಪ ಇದ್ದು, ದಪ್ಪ ಅಕ್ಷರಗಳಲ್ಲಿ ಆಂಬುಲೆನ್ಸ್ ಎಂದು ಬರೆದಿದ್ದರೂ ಇದು ಪ್ರಾಣಿ ಆಂಬುಲೆನ್ಸ್ ಎಂದು ಗುರುತಿಸಲು ಸೋತು, ಅದನ್ನು ಹಲವು ಘಂಟೆಗಳವರೆಗೆ ವಶಪಡಿಸಿಕೊಂಡಿದ್ದರು" ಎಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ನಡೆಸುವ ಪಿ ಎಫ್ ಎ ಟ್ರಸ್ಟಿ ಅಶಿಮಾ ಶರ್ಮ ಹೇಳಿದ್ದಾರೆ.
"ಪ್ರಾಣಿಗಳ ಚಿಕಿತ್ಸೆಗಾಗಿ ಆ ಆಂಬುಲೆನ್ಸ್ ಅನ್ನು ಕಳೆದ ೧೫ ವರ್ಷಗಳಿಂದ ಓಡಿಸುತ್ತಿದ್ದೇವೆ. ಈ ಆಂಬುಲೆನ್ಸ್ ವಶಪಡಿಸಿಕೊಂಡು, ನಮ್ಮ ಆದರಣೀಯ ಕೆಲಸಕ್ಕೆ ಅಡ್ಡಿಪಡಿಸಿದ್ದು ಏಕೆ ಎಂದು ಪೊಲೀಸರು ಉತ್ತರಿಸಬೇಕು" ಎಂದು ಕೂಡ ಶರ್ಮ ಹೇಳಿದ್ದಾರೆ.
"ಪೊಲೀಸರು ಆಂಬುಲೆನ್ಸ್ ನ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ನಂತರ ಅದು ಅಸಲಿ ಎಂದು ತಿಳಿದ ನಂತರ ಬಿಡುಗಡೆ ಮಾಡಿದರು" ಎಂದು ನಗರ ಸೂಪರಿಂಟೆಂಡೆಂಟ್ ಪೊಲೀಸ್ ಆಕಾಶ್ ತೋಮರ್ ಹೇಳಿದ್ದಾರೆ.
ಭಜರಂಗ ದಳದ ಕಾರ್ಯಕರ್ತರು ಪೊಲೀಸರಿಗೆ ದಾರಿತಪ್ಪಿಸಿರುವ ಸಾಧ್ಯತೆ ಇದೆ ಎಂದು ಕೂಡ ಅಶಿಮಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


