ಪ್ರಧಾನ ಸುದ್ದಿ

ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಮತ್ತೆ ತಡೆಗೋಡೆಯಾಗಲಿರುವ ಚೈನಾ

ಅಣ್ವಸ್ತ್ರ ಸರಬರಾಜು ಸಂಘದ (ಎನ್ ಎಸ್ ಜಿ) ಸದಸ್ಯತ್ವಕ್ಕೆ ಭಾರತದ ಅರ್ಜಿಯ ಬಗ್ಗೆ ತನ್ನ ನಿಲುವು ಇನ್ನು ಬದಲಾಗಿಲ್ಲ ಎಂದು ಸೋಮವಾರ ಚೈನಾ ಪುನರುಚ್ಛರಿಸಿದ್ದು, ಬರ್ನ್ ನಲ್ಲಿ ಮುಂದಿನ ತಿಂಗಳು

ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಮತ್ತೆ ತಡೆಗೋಡೆಯಾಗಲಿರುವ ಚೈನಾ
ಸಾಂದರ್ಭಿಕ ಚಿತ್ರ
Published On :
ಬೀಜಿಂಗ್: ಅಣ್ವಸ್ತ್ರ ಸರಬರಾಜು ಸಂಘದ (ಎನ್ ಎಸ್ ಜಿ) ಸದಸ್ಯತ್ವಕ್ಕೆ ಭಾರತದ ಅರ್ಜಿಯ ಬಗ್ಗೆ ತನ್ನ ನಿಲುವು ಇನ್ನು ಬದಲಾಗಿಲ್ಲ ಎಂದು ಸೋಮವಾರ ಚೈನಾ ಪುನರುಚ್ಛರಿಸಿದ್ದು, ಬರ್ನ್ ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಸರ್ವ ಸದಸ್ಯ ಸಭೆಯಲ್ಲಿ ನವದೆಹಲಿಯ ಮನವಿಗೆ ಮತ್ತೆ ಅಡ್ಡಿಪಡಸಲು ಮುಂದಾಗಿರುವ ಮುನ್ಸೂಚನೆ ನೀಡಿದೆ. 
"ಎನ್ ಎಸ್ ಜಿ ಯಲ್ಲಿ ಅಣ್ವಸ್ತ್ರ ನಿಷೇಧ ಕಾಯ್ದೆ (ಎನ್ ಪಿ ಟಿ) ಒಪ್ಪಿಕೊಳ್ಳದ ಸದ್ಯಸ್ಯರು ಭಾಗವಹಿಸುವುದರ ಬಗ್ಗೆ ಚೈನಾ ನಿಲುವುದು ಬದಲಾಗಿಲ್ಲ" ಎಂದು ಚೈನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುಆ ಚುಂಯಿಂಗ್ ಸೋಮವಾರ ಹೇಳಿದ್ದಾರೆ. 
ವಿಶ್ವದ ಅಣ್ವಸ್ತ್ರ ಮಾರಾಟವನ್ನು ನಿಯಂತ್ರಿಸುವ ಎನ್ ಎಸ್ ಜಿ ಸದಸ್ಯತ್ವ ನೀಡುವ ಭಾರತದ ಮನವಿಗೆ ಚೈನಾ ಮೊದಲಿನಿಂದಲೂ ಅಡ್ಡಗಾಲು ಹಾಕುತ್ತಾ ಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.