ಪ.ಬಂಗಾಳ: 4 ಮಹಾನಗರ ಪಾಲಿಕೆ ಟಿಎಂಸಿ ತೆಕ್ಕೆಗೆ, 3 ಜಿಜೆಎಂ ಪಾಲು, ಬಿಜೆಪಿಗೆ ಮುಖಭಂಗ
ಕಳೆದ ಭಾನುವಾರ ಪಶ್ಚಿಮ ಬಂಗಾಳದ ಏಳು ಮಹಾನಗರ ಪಾಲಿಕೆಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಬುಧವಾರ...

Published On :
ಕೊಲ್ಕತಾ: ಕಳೆದ ಭಾನುವಾರ ಪಶ್ಚಿಮ ಬಂಗಾಳದ ಏಳು ಮಹಾನಗರ ಪಾಲಿಕೆಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಬುಧವಾರ ಹೊರ ಬಿದ್ದಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ನಾಲ್ಕು ಮಹಾನಗರ ಪಾಲಿಕೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಅಲ್ಲದೆ ಬಿಜೆಪಿ ಮಿತ್ರ ಪಕ್ಷ ಗೋರಖ್ ಜನಮುಕ್ತಿ ಮೋರ್ಚಾ(ಜಿಜೆಎಂ) ಪಕ್ಷದ ಹಿಡಿತದಲ್ಲಿದ್ದ ಪರ್ವತ ಶ್ರೇಣಿ ಪ್ರದೇಶವಾದ ಡಾರ್ಜಿಲಿಂಗ್ ನ ಮಿರ್ರಿಕ್ ಕೂಡಾ ಟಿಎಂಸಿ ವಶವಾಗುವ ಮೂಲಕ ಬಿಜೆಪಿ ಮುಖಭಂಗ ಅನುಭವಿಸಿದೆ.
ಕಳೆದ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಿರ್ರಿಕ್ ಜಿಜೆಎಂ ಯೇತರ ಪಕ್ಷ ಅಧಿಕಾರಿಕ್ಕೆ ಬಂದಿದೆ. ಉಳಿದಂತೆ ಡಾರ್ಜಿಲಿಂಗ್ ನ ಕುರ್ಸೆಯೋಂಗ್ ಮತ್ತು ಕಾಲಿಂಪಿಂಗ್ ವಾರ್ಡ್ ನಲ್ಲಿ ಗೋರಖ್ ಜನಮುಕ್ತಿ ಮೋರ್ಚಾ ತನ್ನ ಹಿಡಿತವನ್ನು ಮರುಸ್ಥಾಪಿಸಿದೆ.
ತೃಣಮೂಲ ಕಾಂಗ್ರೆಸ್ ದಕ್ಷಿಣ 24 ಪರಗಣಾಸ್ ನ ಪುಜಾಲಿ, ಮುರ್ಶಿದಾಬಾದ್ ನ ಡೋಮ್ಕಾಲ್, ಉತ್ತರ ದಿನಾಜ್ ಪುರ್ ನ ರಾಜ್ ಗಂಜ್ ಹಾಗೂ ಡಾರ್ಜಿಲಿಂಗ್ ನ ಮಿರ್ರಿಕ್ ಸೇರಿದಂತೆ ನಾಲ್ಕು ಮಹಾನಗರ ಪಾಲಿಕೆಯಲ್ಲಿ ವಿಜಯಪತಾಕೆ ಹಾರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಪಶ್ಚಿಮ ಬಂಗಾಳWest BengalTMC wins 4 civic bodiesGJM captures 34 ಮಹಾನಗರ ಪಾಲಿಕೆ ಟಿಎಂಸಿ ತೆಕ್ಕೆಗೆ3 ಜಿಜೆಎಂ ಪಾಲು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


