ಪರಿಷತ್ಗೆ ನಾಮನಿರ್ದೇಶನ: ಇಬ್ಬರಿಗೆ ಒಪ್ಪಿಗೆ, ಸಿ.ಎಂ.ಲಿಂಗಪ್ಪ ಹೆಸರಿಗೆ ರಾಜ್ಯಪಾಲರ ಆಕ್ಷೇಪ
ವಿಧಾನ ಪರಿಷತ್ ಗೆ ಮೂವರ ಹೆಸರನ್ನು ನಾಮ ನಿರ್ದೇಶನ ಮಾಡಿ ರಾಜ್ಯ ಸರ್ಕಾರ ಕಳುಹಿಸಿದ್ದ ಶಿಫಾರಸು ಪಟ್ಟಿಯಲ್ಲಿ...

Published On :
ಬೆಂಗಳೂರು: ವಿಧಾನ ಪರಿಷತ್ ಗೆ ಮೂವರ ಹೆಸರನ್ನು ನಾಮ ನಿರ್ದೇಶನ ಮಾಡಿ ರಾಜ್ಯ ಸರ್ಕಾರ ಕಳುಹಿಸಿದ್ದ ಶಿಫಾರಸು ಪಟ್ಟಿಯಲ್ಲಿ ಇಬ್ಬರ ಹೆಸರನ್ನು ರಾಜ್ಯಪಾಲರು ಒಪ್ಪಿದ್ದು, ಒಬ್ಬರ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮುಖಂಡರಾದ ಮೋಹನ್ ಕೊಂಡಜ್ಜಿ, ಸಿಎಂ ಲಿಂಗಪ್ಪ ಹಾಗೂ ಮಾಜಿ ಮೇಯರ್ ಪಿಆರ್ ರಮೇಶ್ ಅವರನ್ನು ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಶಿಫಾರಸು ಮಾಡಿದ್ದರು. ಈ ಪೈಕಿ ಮೋಹನ್ ಕೊಂಡಜ್ಜಿ ಹಾಗೂ ಪಿಆರ್ ರಮೇಶ್ ಹೆಸರಿಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಶಿಕ್ಷಣ, ಸಮಾಜ ಸೇವೆ ಕೋಟಾದಲ್ಲಿ ಸಿಎಂ ಲಿಂಗಪ್ಪ ಅವರನ್ನು ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡಲು ನಿರಾಕರಿಸಿದ್ದಾರೆ.
ಸಿಎಂ ಲಿಂಗಪ್ಪ ಅವರು ಶಿಕ್ಷಣ ಮತ್ತು ಸಮಾಜ ಸೇವೆ ಕೋಟಾದಲ್ಲಿ ಬರುವುದಿಲ್ಲ ಎಂದಿರುವ ರಾಜ್ಯಪಾಲರು, ಸ್ಪಷ್ಟನೆ ಕೋರಿ ಹಾಗೂ ಅವರ ಹೆಸರನ್ನು ಮರು ಪರಿಶೀಲನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ವಿಧಾನ ಪರಿಷತ್legislative councilobjectsರಾಜ್ಯಪಾಲ ವಜುಭಾಯಿ ವಾಲಾGovernor Vajubhai Valaಆಕ್ಷೇಪCM Lingappaಸಿಎಂ ಲಿಂಗಪ್ಪ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


