ಬಿಹಾರದಲ್ಲಿ ಬಾಗಿಲು ಮುಚ್ಚಿದ ವಿಜಯ್ ಮಲ್ಯ ಅವರ ಯುನೈಟೆಡ್ ಬ್ರ್ಯುವರಿಸ್
ರಾಜ್ಯದಲ್ಲಿ ಮದ್ಯ ನಿಷೇಧ ಕಾಯ್ದೆ ಜಾರಿಯಾದ ಹಿನ್ನಲೆಯಲ್ಲಿ ವಿಜಯ್ ಮಲ್ಯ ಅವರ ಯುನೈಟೆಡ್ ಬ್ರ್ಯುವರಿಸ್ ಬಿಹಾರದಲ್ಲಿ ಉತ್ಪಾದನಾ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ

Published On :
ನವದೆಹಲಿ: ರಾಜ್ಯದಲ್ಲಿ ಮದ್ಯ ನಿಷೇಧ ಕಾಯ್ದೆ ಜಾರಿಯಾದ ಹಿನ್ನಲೆಯಲ್ಲಿ ವಿಜಯ್ ಮಲ್ಯ ಅವರ ಯುನೈಟೆಡ್ ಬ್ರ್ಯುವರಿಸ್ ಬಿಹಾರದಲ್ಲಿ ಉತ್ಪಾದನಾ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ.
"ಏಪ್ರಿಲ್ ೨೦೧೭ ರಿಂದ ಜಾರಿಯಾದ ಮದ್ಯ ನಿಷೇಧ ಕಾಯ್ದೆಯ ಪರಿಣಾಮವಾಗಿ ಪಾಟ್ನಾ ಜಿಲ್ಲೆಯ ನೌಬತ್ಪುರದಲ್ಲಿದ್ದ ಸಂಸ್ಥೆಯ ಉತ್ಪಾದನಾ ಕೇಂದ್ರದ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದೇವೆ" ಎಂದು ಯುನೈಟೆಡ್ ಬ್ರ್ಯುವರಿಸ್ ಲಿಮಿಟೆಡ್ (ಯುಬಿಎಲ್) ತಿಳಿಸದೆ.
ಏಪ್ರಿಲ್ ೧ ರಿಂದ ಪ್ರಾದೇಶಿಕವಾಗಿ ಮದ್ಯದ ಉತ್ಪಾದನೆ, ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿ ಬಿಹಾರದ ಮಹಾ ಘಟಬಂಧನ ಸರ್ಕಾರ ಆದೇಶ ಹೊರಡಿಸಿತ್ತು, ನಂತರ ಈ ನಿಷೇಧವನ್ನು ವಿದೇಶಿ ಮದ್ಯಗಳಿಗೂ ಅನ್ವಯವಾಗುವಂತೆ ಮಾಡಿ ಸಂಪೂರ್ಣ ನಿಷೇಧ ಹೇರಿತ್ತು.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸರ್ಕಾರದ ಸಂಪೂರ್ಣ ಮದ್ಯ ನಿಷೇಧ ಕಾಯ್ದೆಯನ್ನು ಪಾಟ್ನಾ ಹೈಕೋರ್ಟ್ ತೆರವು ಮಾಡಿತ್ತು. ಬಿಹಾರ ಸರ್ಕಾರ ಪಾಟ್ನಾ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ ಎಂದು ಯುಬಿಎಲ್ ತಿಳಿಸಿದೆ.
ಯುಬಿಎಲ್ ಒಡೆತನದ ೨೧ ಉತ್ಪಾದನಾ ಸಂಸ್ಥೆಗಳು ದೇಶದಾದ್ಯಂತ ಕಾರ್ಯಚಟುವಟಿಕೆ ನಡೆಸುತ್ತಿದ್ದವು. ಬಿಹಾರದಲ್ಲಿ ಕೇವಲ ಒಂದು ಉತ್ಪಾದನಾ ಸಂಸ್ಥೆ ಇತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


