ರಾಹುಲ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಸೋನಿಯಾ ತುರ್ತಾಗಿ ನೇಮಿಸಿ: ಕಾಂಗ್ರೆಸ್ ಮುಖಂಡ
ಅನಾರೋಗ್ಯದಿಂದ ಬಳಲುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಪುತ್ರ ರಾಹುಲ್ ಗಾಂಧಿ ಅವರನ್ನು ಶೀಘ್ರವೇ ಅಧ್ಯಕ್ಷ ಗಾದಿಗೆ ಏರಿಸಬೇಕು, ತಡವಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಂಗ್ರೆಸ್

Published On :
ಪಣಜಿ: ಅನಾರೋಗ್ಯದಿಂದ ಬಳಲುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಪುತ್ರ ರಾಹುಲ್ ಗಾಂಧಿ ಅವರನ್ನು ಶೀಘ್ರವೇ ಅಧ್ಯಕ್ಷ ಗಾದಿಗೆ ಏರಿಸಬೇಕು, ತಡವಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಂಗ್ರೆಸ್ ಮುಕ್ತ ಭಾರತದ ಗುರಿಗೆ ಸಹಾಯ ಮಾಡಿದಂತಾಗುತ್ತದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಬುಧವಾರ ಹೇಳಿದ್ದಾರೆ.
"ಸೋನಿಯಾ ಗಾಂಧಿ ಅವರಿಗೆ ಆರೋಗ್ಯ ಸರಿ ಇಲ್ಲದಿದ್ದರೆ, ಕಾಂಗ್ರೆಸ್ ಪಕ್ಷವನ್ನು ಕೂಡ ಅನಾರೋಗ್ಯದಿಂದ ಬಳಲುವಂತೆ ಮಾಡುವುದು ಸರಿಯಲ್ಲ. ಇದು ಮೋದಿ ಅವರ ಕಾಂಗ್ರೆಸ್ ಮುಕ್ತ ಭಾರತದ ಕಲ್ಪನೆಗೆ ಸಹಾಯ ಮಾಡಿದಂತಾಗುತ್ತದೆ" ಎಂದು ಮಾಜಿ ಗೋವಾ ಕಾಂಗ್ರೆಸ್ ಅಧ್ಯಕ್ಷ ಜಾನ್ ಫರ್ನಾಂಡಿಸ್ ಹೇಳಿದ್ದಾರೆ.
"ರಾಹುಲ್ ಗಾಂಧಿ ಅವರ ಕೈಗೆ ಅಧ್ಯಕ್ಷ ಸ್ಥಾನ ಒಪ್ಪಿಸುವುದಾದರೆ ಅದನ್ನು ಶೀಘ್ರದಲ್ಲೇ ಮಾಡಬೇಕು ಏಕೆಂದರೆ ಅವರು ಅನಾರೋಗ್ಯದಿಂದಿದ್ದಾರೆ" ಎಂದು ಕೂಡ ಫರ್ನಾಂಡಿಸ್ ಹೇಳಿದ್ದಾರೆ.
೨೦೧೪ರ ಲೋಕಸಭಾ ಚುನಾವಣೆಯ ಸೋಲಿನ ನಂತರ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಮಾವೇಶ ಕೂಡ ಕರೆಯದೆ ಇರುವುದಕ್ಕೆ ಅವರು ಹೈಕಮಾಂಡ್ ಅನ್ನು ಖಂಡಿಸಿದ್ದು, ಇದು ಪಕ್ಷಕ್ಕೆ ಹಾನಿಯುಂಟುಮಾಡಲಿದೆ ಎಂದಿದ್ದಾರೆ.
"ಕಾಂಗ್ರೆಸ್ ಖಾಯಿಲೆ ಹಿಂಡಿದಂತೆ ಸುಮ್ಮನೆ ಹಿಂದಕ್ಕೆ ಬೀಳಬಾರದು. ಕಾಂಗ್ರೆಸ್ ಮತ್ತೆ ಪುಟಿದೇಳಬೇಕು. ನನ್ನಂತಹ ಕಾರ್ಯಕರ್ತರು ಇದ್ದರೆ ಮತ್ತು ನಾವೆಲ್ಲಾ ಒಟ್ಟಿಗೆ ಕೆಲಸ ಮಾಡಿದರೆ, ಮತ್ತು ಜನಕ್ಕೆ ಕಾಂಗ್ರೆಸ್ ಬೇಕಿರುವುದರಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಇದಕ್ಕೆ ಗೋವಾ ವಿಧಾನಸಭಾ ಚುನಾವಣಾ ಮುನ್ಸೂಚನೆ" ಎಂದು ಎರಡು ಬಾರಿಯ ರಾಜ್ಯ ಸಭಾ ಸಂಸದ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


