ಪ್ರಧಾನ ಸುದ್ದಿ

ಕಾಶ್ಮೀರ ವಿವಾದ; ಭಾರತ ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ಇರಾನ್

ಎರಡು ದೇಶಗಳು ಆಸಕ್ತಿ ತೋರಿದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಲು ಇರಾನ್ ಸಿದ್ಧ ಎಂದು ಪಾಕಿಸ್ತಾನದ ಇರಾನ್ ರಾಯಭಾರಿ ಮೆಹದಿ ಹೊನರ್ದೂಸ್ಟ್

ಕಾಶ್ಮೀರ ವಿವಾದ; ಭಾರತ ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ಇರಾನ್
ಸಾಂದರ್ಭಿಕ ಚಿತ್ರ
Published On :
ಇಸ್ಲಾಮಾಬಾದ್: ಎರಡು ದೇಶಗಳು ಆಸಕ್ತಿ ತೋರಿದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಲು ಇರಾನ್ ಸಿದ್ಧ ಎಂದು ಪಾಕಿಸ್ತಾನದ ಇರಾನ್ ರಾಯಭಾರಿ ಮೆಹದಿ ಹೊನರ್ದೂಸ್ಟ್ ಹೇಳಿದ್ದಾರೆ.
"ಎರಡು ದೇಶಗಳ ನಡುವಿನ ವಿವಾದ ಅಭಿವೃದ್ಧಿ ಮತ್ತು ಪ್ರಗತಿಗೆ ಮಾರಕವಾಗಿರುವುದಲ್ಲದೆ ಈ ಪ್ರದೇಶದ ಇತರ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಕೂಡ ಪರಿಣಾಮ ಬೀರಲಿದೆ" ಎಂದು ಪಾಕಿಸ್ತಾನದ ನ್ಯೂಸ್ ಏಜೆನ್ಸಿಯೊಂದಿಗೆ ಸಂದರ್ಶನದಲ್ಲಿ ಹೊನರ್ದೂಸ್ಟ್ ಹೇಳಿದ್ದಾರೆ. 
ಪಾಕಿಸ್ತಾನ-ಇರಾನ್ ನಡುವಿನ ವ್ಯಾವಹಾರಿಕ ಸಂಬಂಧಗಳ ಬಗ್ಗೆಯೂ ಪ್ರತಿಕ್ರಿಯಿಸಿರುವ ಅವರು ಎರಡು ದೇಶಗಳ ನಡುವೆ ಮುಕ್ತ ಮಾರಾಟ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಮತ್ತು ಇದು ಶೀಘ್ರದಲ್ಲೇ ಜಾರಿಯಾಗಲಿದ್ದು, ಎರಡು ದೇಹಗಳ ನಡುವೆ ವ್ಯಾವಹಾರಿಕ ಬಾಂಧವ್ಯ ವೃದ್ಧಿಸಲಿದೆ ಎಂದಿದ್ದಾರೆ. 
"ಎಲ್ಲ ಅಡೆತೊಡೆಗಳನ್ನು ತೊಡೆದುಹಾಕಿದ ಮೇಲೆ ನಮ್ಮ ಭವಿಷ್ಯ ಹಸಿರಾಗಿದೆ" ಎಂದು ಕೂಡ ಅವರು ಹೇಳಿದ್ದಾರೆ. 
೪೬ ಬಿಲಿಯನ್ ಡಾಲರ್ ನ ಚೈನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಬಗೆಗಿನ ಪ್ರಶ್ನೆಗೆ, ಇದು ಮಹತ್ವವಾದ ಯೋಜನೆ ಎಂದು  ಹೊನರ್ದೂಸ್ಟ್ ತಿಳಿಸಿದ್ದು, ಈ ಪ್ರದೇಶದಲ್ಲಿ ದೇಶಗಳನ್ನು ಒಗ್ಗೂಡಿಸುವ ಶಕ್ತಿಯಾಗಿ ಈ ಯೋಜನೆ ಬೆಳೆಯಲಿದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.