ಪ್ರಧಾನ ಸುದ್ದಿ

ಲಂಡನ್ ಸಂಸತ್ ಬಳಿ ಉಗ್ರ ದಾಳಿ; ಮೃತರಿಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ

ಐದು ಜನರ ಸಾವಿಗೆ ಕಾರಣವಾದ ಲಂಡನ್ ಸಂಸತ್ ಬಳಿಯ ಉಗ್ರ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಉಗ್ರ ದಾಳಿಯನ್ನು ಖಂಡಿಸಿದ್ದು, ಸಾವನ್ನಪ್ಪಿದವರ ಕುರಿತಂತೆ ಸಂತಾಪ ಸೂಚಿಸಿದ್ದಾರೆ.

ಲಂಡನ್ ಸಂಸತ್ ಬಳಿ ಉಗ್ರ ದಾಳಿ; ಮೃತರಿಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ಲಂಡನ್ ಸಂಸತ್ ಮೇಲೆ ಉಗ್ರ ದಾಳಿ
Published On :

ಲಂಡನ್: ಐದು ಜನರ ಸಾವಿಗೆ ಕಾರಣವಾದ ಲಂಡನ್ ಸಂಸತ್ ಬಳಿಯ ಉಗ್ರ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಉಗ್ರ ದಾಳಿಯನ್ನು ಖಂಡಿಸಿದ್ದು, ಸಾವನ್ನಪ್ಪಿದವರ ಕುರಿತಂತೆ ಸಂತಾಪ ಸೂಚಿಸಿದ್ದಾರೆ.

ಟ್ವಿಟರ್ ನಲ್ಲಿ ಈ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಲಂಡನ್ ಸಂಸತ್ ಬಳಿಯ ಉಗ್ರ ದಾಳಿಯಲ್ಲಿ ಹಲವರು ಮೃತಪಟ್ಟ ವಿಚಾರ ಕೇಳಿ ತುಂಬಾ ನೋವಾಯಿತು. ಸಂತ್ರಸ್ತ ಕುಟುಂಬಗಳೊಂದಿಗೆ ನಾವಿದ್ದು, ಮೃತರ  ಆತ್ಮಕ್ಕೆ ಶಾಂತಿ ಕೋರುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಭಯೋಕ್ಪಾದನೆ ವಿರುದ್ಧ ಕಿಡಿಕಾರಿರುವ ಪ್ರಧಾನಿ ಮೋದಿ ಭಯೋತ್ಪಾದನೆ ವಿರುದ್ಧ ಬ್ರಿಟನ್ ಹೋರಾಟದಲ್ಲಿ ಸದಾಕಾಲ ಭಾರತದ ಜೊತೆಗಿರುತ್ತದೆ ಎಂದು  ಭರವಸೆ ನೀಡಿದ್ದಾರೆ.

ಬುಧವಾರ ಲಂಡನ್ ಸಂಸತ್ ಭವನದ ಬಳಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಕನಿಷ್ಟ 5 ಮಂದಿ ಸಾವನ್ನಪ್ಪಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.