ಪ್ರಧಾನ ಸುದ್ದಿ

ತೆರಿಗೆ ಪಾವತಿಗೆ ಆಧಾರ್ ಕಡ್ಡಾಯ, ರಾಜಕೀಯ ಪಕ್ಷಗಳಿಗೆ ಚೆಕ್, ಡಿಡಿ ಮೂಲಕ ಮಾತ್ರ ದೇಣಿಗೆ!

ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತೆ ತಮ್ಮ ಹಣಕಾಸು ಕಾಯ್ದೆಗೆ ತಿದ್ದುಪಡಿ ತರುವ ಮುನ್ಸೂಚನೆ ನೀಡಿದ್ದು, ಈ ಹಿಂದೆ ಘೋಷಣೆಯಾಗಿದ್ದ ನಗದು ವಹಿವಾಟು ಮಿತಿಯನ್ನು 3 ರಿಂದ 2 ಲಕ್ಷಕ್ಕೆ ಇಳಿಕೆ ಮಾಡುವ ಕುರಿತು ಚಿಂತನೆಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.

ತೆರಿಗೆ ಪಾವತಿಗೆ ಆಧಾರ್ ಕಡ್ಡಾಯ, ರಾಜಕೀಯ ಪಕ್ಷಗಳಿಗೆ ಚೆಕ್, ಡಿಡಿ ಮೂಲಕ ಮಾತ್ರ ದೇಣಿಗೆ!
ಸಂಗ್ರಹ ಚಿತ್ರ
Published On :

ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತೆ ತಮ್ಮ ಹಣಕಾಸು ಕಾಯ್ದೆಗೆ ತಿದ್ದುಪಡಿ ತರುವ ಮುನ್ಸೂಚನೆ ನೀಡಿದ್ದು, ಈ ಹಿಂದೆ ಘೋಷಣೆಯಾಗಿದ್ದ ನಗದು ವಹಿವಾಟು ಮಿತಿಯನ್ನು 3 ರಿಂದ 2 ಲಕ್ಷಕ್ಕೆ ಇಳಿಕೆ ಮಾಡುವ ಕುರಿತು  ಚಿಂತನೆಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಸರ್ಕಾರದ ಉದ್ದೇಶಿದ ಹಣಕಾಸು ಕಾಯ್ದೆ ಪ್ರಮುಖವಾಗಿ 44 ತಿದ್ದಪಡಿಗಳನ್ನು ತರಲಾಗಿದ್ದು, ಈ ತಿದ್ದುಪಡಿಗಳ ಪೈಕಿ ನಗದು ವಹಿವಾಟು ಮಿತಿಯನ್ನು 3 ಲಕ್ಷ ರು.ಗಳಿಂದ 2 ಲಕ್ಷ ರುಗಳಿಗೆ ಇಳಿಕೆ ಮಾಡುವ ಕುರಿತು ಕೇಂದ್ರ  ಸರ್ಕಾರ ನಿರ್ಧರಿಸಿದೆ. ಅಂತೆಯೇ ತೆರಿಗೆ ಪಾವತಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡುವ ನಿರ್ಧಾರವನ್ನೂ ಸರ್ಕಾರ ಕೈಗೊಂಡಿದ್ದು, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರು ಚೆಕ್ ಮತ್ತು ಆನ್ ಲೈನ್ ಬ್ಯಾಕಿಂಗ್ ಮೂಲಕ  ಮಾತ್ರವೇ ದೇಣಿಗೆ ನೀಡಬೇಕು ಎನ್ನುವ ನೀತಿಯನ್ನೂ ಜಾರಿ ಮಾಡಲು ಕೇಂದ್ರ ಸರ್ಕಾರ ಚಿಂತನೆಯಲ್ಲಿ ತೊಡಗಿದೆ.

ಈ ಮಹತ್ವದ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಈ ಹಿಂದೆಯೇ ನಿರ್ಧರಿಸಿತ್ತಾದರೂ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಬಿಜೆಡಿ ಸೇರಿದಂತೆ ಪ್ರಮುಖ ವಿಪಕ್ಷಗಳು ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದವು. ಪ್ರಮುಖವಾಗಿ  ರಾಜಕೀಯ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ಹರಿದು ಬರುವ ಹಣಕ್ಕೆ ಲೆಕ್ಕ ನೀಡಬೇಕು ಮತ್ತು ದಾಖಲೆ ಹೊಂದಿರಬೇಕು,. ದೇಣಿಗೆ ನೀಡಬಯಸುವವರು ಚೆಕ್, ಡಿಡಿ, ವಿದ್ಯುನ್ಮಾನ ಬ್ಯಾಂಕಿಂಗ್ ಮೂಲಕ ಮಾತ್ರ ನೀಡಬೇಕು ಎನ್ನುವ  ನೀತಿಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು.

ಇದೀಗ ಕೇಂದ್ರ ಸರ್ಕಾರದ ಈ ಕಾಯ್ದೆಗೆ ತಿದ್ದುಪಡಿ ಮಾಡುವಂತೆ ಸರ್ಕಾರದ ವಿತ್ತ ಸಚಿವಾಲಯ ಕೆಲ ಉನ್ನತ ಮಟ್ಟದ ಅಧಿಕಾರಿಗಳು ಸಲಹೆ ನೀಡಿದ್ದು, ಅದರಂತೆ ಕಾಯ್ದೆಗೆ ಒಟ್ಟು 44 ತಿದ್ದುಪಡಿಗಳನ್ನು ಕೇಂದ್ರ ಸರ್ಕಾರ ಮಾಡಿದೆ  ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ನಗದು ರಹಿತ ವಹಿವಾಟಿನ ಮಿತಿಯನ್ನು 3 ಲಕ್ಷದಿಂದ 2 ಲಕ್ಷಕ್ಕೆ ಇಳಿಸುವುದು, ತೆರಿಗೆ ಪಾವತಿಗೆ ಆಧಾರ್ ಕಾರ್ಡ್ ಕಡ್ಡಾಯ, ವೈಯುಕ್ತಿಕ ಖಾತೆಗಳಲ್ಲಿನ ತೆರಿಗೆ ಪಾವತಿಗೆ ಪ್ಯಾನ್ ಕಡ್ಡಾಯ  ಮತ್ತು ರಾಜಕೀಯ ಪಕ್ಷಗಳ ದೇಣಿಗೆ ನಗದು ರಹಿತವಾಗಿರಬೇಕು ಮತ್ತು ನಿಯಮ ಮೀರಿ ಅತೀ ಹೆಚ್ಚು ಪ್ರಮಾಣದಲ್ಲಿ ನಗದು ವಹಿವಾಟು ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಂತಹವರಿಗೆ ಎಷ್ಟು ಪ್ರಮಾಣದಲ್ಲಿ  ನಗದು ವಹಿವಾಟು ನಡೆಸಿರುತ್ತಾರೆಯೇ ಅಷ್ಟೇ ಪ್ರಮಾಣದ ದಂಡ ವಿಧಿಸಬೇಕು ಎನ್ನುವ ಅಂಶಗಳನ್ನು ಅಧಿಕಾರಿಗಳು ಶಿಫಾರಸ್ಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳ ಶಿಫಾರಸ್ಸಿನ ಅನ್ವಯ ಕೇಂದ್ರ ಸರ್ಕಾರ ಕೂಡ  ತನ್ನ ಹಣಕಾಸು ಕಾಯ್ದೆ ತಿದ್ದುಪಡಿ ಮಾಡಿದ್ದು,44 ಬದಲಾವಣೆಗಳನ್ನು ಮಾಡಿದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಕೇಂದ್ರ ಸರ್ಕಾರದ ಈ ತಿದ್ದುಪಡಿ ನಿಯಮಗಳು ಇದೇ ಜುಲೈ 1ರಿಂದ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆಯಾದರೂ, ಈ ಬಗ್ಗೆ ಕೇಂದ್ರ ಸರ್ಕಾರದಿಂದ ಮಾತ್ರ ಯಾವುದೇ ರೀತಿಯ ಸ್ಪಷ್ಟನೆ  ಹೊರಬಿದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.