ಪ್ರಧಾನ ಸುದ್ದಿ

ಹೆರಿಗೆ ಸೌಲಭ್ಯ (ತಿದ್ದುಪಡಿ) ಮಸೂದೆ ೨೦೧೬ ರಾಜ್ಯಸಭೆಯಲ್ಲಿ ಅಂಗೀಕಾರ

ಹೆರಿಗೆ ಸೌಲಭ್ಯ (ತಿದ್ದುಪಡಿ) ಮಸೂದೆ ೨೦೧೬ ನ್ನು ಸೋಮವಾರ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ.

ಹೆರಿಗೆ ಸೌಲಭ್ಯ (ತಿದ್ದುಪಡಿ) ಮಸೂದೆ ೨೦೧೬ ರಾಜ್ಯಸಭೆಯಲ್ಲಿ ಅಂಗೀಕಾರ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಹೆರಿಗೆ ಸೌಲಭ್ಯ (ತಿದ್ದುಪಡಿ) ಮಸೂದೆ ೨೦೧೬ ನ್ನು ಸೋಮವಾರ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. 
ಈ ಮಸೂದೆಯ ತಿದ್ದುಪಡಿಯ ಪ್ರಕಾರ ನೌಕರಿಯಲ್ಲಿರುವ ತಾಯಂದಿರಿಗೆ ಹೆರಿಗೆ ರಜೆಯನ್ನು ಸದ್ಯದ ೧೨ ವಾರಗಳಿಂದ ೨೬ ವಾರಗಳಿಗೆ ಹೆಚ್ಚಿಸಲಾಗಿದೆ. ಈ ಮಸೂದೆ ಕಳೆದ ವರ್ಷ ಆಗಸ್ಟ್ ೧೧ ರಂದೇ ರಾಜ್ಯಸಭೆಯಲ್ಲಿ ಅಂಗೀಕಾರವಾಗಿತ್ತು. ಆದರೆ ತಾಂತ್ರಿಕ ತಿದ್ದುಪಡಿಯಿಂದ ರಾಜ್ಯಸಭೆಯಲ್ಲಿ ಮತ್ತೆ ಅಂಗೀಕಾರ ಮಾಡಲಾಗಿದೆ ಎಂದು ರಾಜ್ಯಸಭೆಯ ಉಪಸಭಾಪತಿ ಪಿ ಜೆ ಕುರಿಯನ್ ಹೇಳಿದ್ದಾರೆ. 
ಕೂಗು ಮತದ ಈ ಮಸೂದೆಯನ್ನು ಅಂಗೀಕರಿಸಲಾಗಿದೆ. 
ಮೂರು ತಿಂಗಳಿಗಿಂತಲೂ ಚಿಕ್ಕ ಮಗುವನ್ನು ದತ್ತು ಸ್ವೀಕರಿಸುವ ತಾಯಿಗೆ ಈ ಮಸೂದೆಯಲ್ಲಿ ೧೨ ವಾರಗಳ ರಜೆಯನ್ನು ಕಲ್ಪಿಸಲಾಗಿದೆ. 
ಹಾಗೆಯೇ ಈ ರಜದ ಅವಧಿ ಮುಗಿದ ಮೇಲೆ ಆರೋಗ್ಯದ ದೃಷ್ಟಿಯಿಂದ ಅಗತ್ಯತೆ ಇದ್ದಲ್ಲಿ, 'ಮನೆಯಿಂದ ಕೆಸಲಕ್ಕೆ' ಅವಕಾಶ ನೀಡುವ ಸೌಲಭ್ಯವನ್ನು ಕೂಡ ಆ ಮಸೂದೆ ಮಾಡಿಕೊಟ್ಟಿದೆ. ೫೦ ಅಥವಾ ಅದಕ್ಕಿಂತಲೂ ಹೆಚ್ಚು ನೌಕರನ್ನು ಹೊಂದಿರುವ ಉದ್ಯೋಗ ಸಂಸ್ಥೆಗಳು ಮಕ್ಕಳನ್ನು ನೋಡಿಕೊಳ್ಳುವ ಕ್ರಶ್ ಗಳನ್ನೂ ಸ್ಥಾಪಿಸುವುದು ಕೂಡ ಕಡ್ಡಾಯ ಮಾಡಿ ತಿದ್ದುಪಡಿ ಮಾಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.