ಪ್ರಧಾನ ಸುದ್ದಿ

ಗೋವಾದಲ್ಲಿ ಬಿಜೆಪಿ ಮುಂದಾಳತ್ವದ ಮೈತ್ರಿ ಶೀಘ್ರದಲ್ಲೇ ಕುಸಿಯಲಿದೆ: ಶಿವಸೇನಾ

ಗೋವಾದಲ್ಲಿ ಬಿಜೆಪಿ ಮುಂದಾಳತ್ವದ ಮೈತ್ರಿ ಶೀಘ್ರದಲ್ಲೇ ಕುಸಿಯಲಿದೆ ಎಂದು ಶಿವಸೇನಾ ವಕ್ತಾರ ಸಂಜಯ್ ರಾವತ್ ಸೋಮವಾರ ಹೇಳಿದ್ದಾರೆ. ತಮ್ಮದೇ ಆಡಳಿತ ಮೈತ್ರಿ ಪಕ್ಷ ಬಿಜೆಪಿ,

ಗೋವಾದಲ್ಲಿ ಬಿಜೆಪಿ ಮುಂದಾಳತ್ವದ ಮೈತ್ರಿ ಶೀಘ್ರದಲ್ಲೇ ಕುಸಿಯಲಿದೆ: ಶಿವಸೇನಾ
ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ
Published On :
ಪಣಜಿ: ಗೋವಾದಲ್ಲಿ ಬಿಜೆಪಿ ಮುಂದಾಳತ್ವದ ಮೈತ್ರಿ ಶೀಘ್ರದಲ್ಲೇ ಕುಸಿಯಲಿದೆ ಎಂದು ಶಿವಸೇನಾ ವಕ್ತಾರ ಸಂಜಯ್ ರಾವತ್ ಸೋಮವಾರ ಹೇಳಿದ್ದಾರೆ. ತಮ್ಮದೇ ಆಡಳಿತ ಮೈತ್ರಿ ಪಕ್ಷ ಬಿಜೆಪಿ, ಎರಡು ಪ್ರಾದೇಶಿಕ ಪಕ್ಷಗಳು ಮತ್ತು ಇಬ್ಬರು ಸ್ವತಂತ್ರ ಶಾಸಕರ ಜೊತೆಗಿನ ಮೈತ್ರಿ 'ಭ್ರಷ್ಟಾಚಾರದ ಕೂಟ' ಎಂದು ಕೂಡ ಅವರು ದೂರಿದ್ದಾರೆ.
"ಸರ್ಕಾರವನ್ನು ಭದ್ರ ಪಡಿಸಲು ಮತ್ತು ಅಧಿಕಾರದಲ್ಲಿರಲು ಮನೋಹರ್ ಪರ್ರಿಕರ್ ಅವರು ಭದ್ರತಾ ಸಚಿವಾಲಯ ತೊರೆದು ಗೋವಾಗೆ ಬಂದಿದ್ದಾರೆ. ಆದರೆ ಹೆಜ್ಜೆ ಗಟ್ಟಿಯಾಗಿ ಊರಲು ಸಾಧ್ಯವಾಗಿಲ್ಲ ಮತ್ತು ಯಾವಾಗ ಬೇಕಾದರೂ ಕುಸಿಯಬಹುದು ಎಂದು ಅವರಿಗೆ ತಿಳಿದಿದೆ. ಇದು ಭ್ರಷ್ಟಾಚಾರದ ಮೈತ್ರಿ" ಎಂದು ರಾವತ್ ಮಾಧ್ಯಮಗಳಿಗೆ ಹೇಳಿದ್ದಾರೆ. 
ತಮ್ಮ ಪಕ್ಷದ ವಿರುದ್ಧ ನೀಡಿದ್ದ ಜನಾದೇಶವನ್ನು ಬಿಜೆಪಿ ಕಸಿದುಕೊಂಡಿದೆ ಮತ್ತು ಬಿಜೆಪಿ ವಿರುದ್ಧ ಚುನಾವಣೆಗೆ ಹೋಗಿದ್ದ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ಮತ್ತು ಗೋವಾ ಫಾರ್ವರ್ಡ್ ಪಕ್ಷಗಳು ಮತ್ತೆ ಕೇಸರಿ ಪಕ್ಷಕ್ಕೆ ಸೇರಿರುವುದೂ ಗೋವಾ ಮತದಾರರಿಗೆ ಬಗೆದಿರುವ ದ್ರೋಹ  ಎಂದು ಕೂಡ ಅವರು ಹೇಳಿದ್ದಾರೆ. 
"ಇವೆರಡೂ ಪಕ್ಷಗಳು ಬಿಜೆಪಿ ವಿರುದ್ಧ ಸೆಣಸಿದ್ದವು ಆದರೆ ಕೂಡಲೇ ಅದೇ ಪಕ್ಷದ ಜೊತೆಗೆ ಕೈಜೋಡಿಸಿವೆ. ಇದು ಗೋವಾ ಜನತೆಯ ನಂಬಿಕೆಗೆ ಬಗೆದ ದ್ರೋಹ ಮತ್ತು ಅವರನ್ನು ಜನ ಕ್ಷಮಿಸುವುದಿಲ್ಲ" ಎಂದು ಗೋವಾದಲ್ಲಿ ಒಂದು ಕ್ಷೇತ್ರವನ್ನೂ ಗೆಲ್ಲದ ಶಿವಸೇನೆ ಮುಖಂಡ ರಾವತ್ ಹೇಳಿದ್ದು, ರಾಜ್ಯದಲ್ಲಿ ತಮ್ಮ ಕೆಲಸವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ. 
"ನಾವಿಲ್ಲಿ ಚುನಾವಣೆಗಷ್ಟೇ ಇರುವುದಲ್ಲ. ಉದ್ಧವ್ ಠಾಕ್ರೆ (ಶಿವಸೇನಾ ಅಧ್ಯಕ್ಷ) ಮುಂದಿನ ತಿಂಗಳು ಗೋವಾಗೆ ಬರಲಿದ್ದಾರೆ ಮತ್ತು ಆಗ ದೊಡ್ಡ ಸಭೆಯನ್ನು ಆಯೋಜಿಸಿ ಗೋವಾದಲ್ಲಿನ ಮುಂದಿನ ಕಾರ್ಯಚಟುವಟಿಕೆಗಳನ್ನು ಘೋಷಿಸಲಾಗುವದು" ಎಂದಿದ್ದಾರೆ. 
೧೩ ಕ್ಷೇತ್ರಗಳನ್ನಷ್ಟೇ ಗೆದ್ದಿದ್ದ ಬಿಜೆಪಿ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ಮತ್ತು ಗೋವಾ ಫಾರ್ವರ್ಡ್ ಪಕ್ಷಗಳ ತಲಾ ಮೂರೂ ಸದಸ್ಯರ ಬೆಂಬಲ ಮತ್ತು ಇಬ್ಬರು ಸ್ವತಂತ್ರ ಶಾಸಕರ ಬೆಂಬಲದಿಂದ ಸರ್ಕಾರ ರಚಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.