ಪ್ರಧಾನ ಸುದ್ದಿ

ವಿಡಿಯೋ: ಪತ್ನಿ ಮಾತಿಗೂ ಬೆಲೆ ಕೊಡದೆ ಯೋಧರತ್ತ ಗುಂಡು ಹಾರಿಸಿ ಎನ್ ಕೌಂಟರ್ ನಲ್ಲಿ ಸತ್ತ ಉಗ್ರ!

ಕಣಿವೆ ರಾಜ್ಯ ಪುಲ್ವಾಮದಲ್ಲಿ ಗುರುವಾರ ನಡೆದ ಉಗ್ರರ ಎನ್ ಕೌಂಟರ್ ಪ್ರಕರಣ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಎನ್ ಕೌಂಟರ್ ವೇಳೆ ಉಗ್ರನ ಬಂಧನಕ್ಕೆ ಯೋಧರು ಸತತ ಪ್ರಯತ್ನಿಸಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.

ವಿಡಿಯೋ: ಪತ್ನಿ ಮಾತಿಗೂ ಬೆಲೆ ಕೊಡದೆ ಯೋಧರತ್ತ ಗುಂಡು ಹಾರಿಸಿ ಎನ್ ಕೌಂಟರ್ ನಲ್ಲಿ ಸತ್ತ ಉಗ್ರ!
ಉಗ್ರನ ಮನವೊಲಿಸುತ್ತಿರುವ ಆತನ ಪತ್ನಿ ದಿಲ್ಶಾದ
Published On :

ಶ್ರೀನಗರ: ಕಣಿವೆ ರಾಜ್ಯ ಪುಲ್ವಾಮದಲ್ಲಿ ಗುರುವಾರ ನಡೆದ ಉಗ್ರರ ಎನ್ ಕೌಂಟರ್ ಪ್ರಕರಣ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಎನ್ ಕೌಂಟರ್ ವೇಳೆ ಉಗ್ರನ ಬಂಧನಕ್ಕೆ ಯೋಧರು ಸತತ ಪ್ರಯತ್ನಿಸಿದ್ದ ವಿಡಿಯೋ ಇದೀಗ ವೈರಲ್  ಆಗಿದೆ.

ನಿನ್ನೆ ಪುಲ್ವಾಮದ ಆವಂತಿಪೋರಾದಲ್ಲಿ ಅಡಗಿ ಕುಳಿತು ಯೋಧರತ್ತ ಗುಂಡು ಹಾರಿಸುತ್ತಿದ್ದ ಉಗ್ರ ಸಫೀಖ್ ಶೆರ್ಗೂರ್ಜಿಯ ಜೀವ ಸಹಿತ ಬಂಧನಕ್ಕೆ ಯೋಧರು ಹರ ಸಾಹಸಪಟ್ಟ ವಿಚಾರ ಇದೀಗ ಬೆಳಕಿಗೆ ಬಂದಿದೆ. ಉಗ್ರನ  ಬಂಧನಕ್ಕೆ ಯೋಧರು ಸಾಕಷ್ಟು ಪ್ರಯತ್ನ ಮಾಡಿದ್ದರಾದರೂ ಉಗ್ರನ ಮನವೊಲಿಸುವಲ್ಲಿ ವಿಫಲರಾಗಿದ್ದರು. ಅಂತಿಮ ಭಾಗವಾಗಿ ಉಗ್ರನ ಪತ್ನಿ ಮತ್ತು ಮಗನನ್ನು ಕರೆಸಿ ಆವರಿಂದ ಮನವಿ ಮಾಡಿಸಿದರೂ ಉಗ್ರನ ಮನಸ್ಸು ಮಾತ್ರ  ಕರಗಿರಲಿಲ್ಲ. ಪತ್ನಿ ಯೋಧರ ವಶದಲ್ಲಿದ್ದರೂ ಉಗ್ರ ಮಾತ್ರ ಗುಂಡು ಹಾರಿಸುತ್ತಲೇ ಇದ್ದ. ಹೀಗಾಗಿ ಅಂತಿಮವಾಗಿ ಬೇರೆ ವಿಧಿ ಇಲ್ಲದೇ ಯೋಧರು ಉಗ್ರನ ವಿರುದ್ಧ ಪ್ರತಿದಾಳಿ ಮಾಡಿನನ್ನು ಹತ್ಯೆಗೈದಿದ್ದರು.

ಉಗ್ರನ ಮನವೊಲಿಕೆಗೆ ಆತನ ಪತ್ನಿ ಮಾಡಿದ ಪ್ರಯತ್ನ ನಿಜಕ್ಕೂ ಸಿನಿಮಾಗಳನ್ನು ನೆನಪಿಸುವಂತಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ. ಅಡಗಿ ಕುಳಿತಿದ್ದ ಪತಿಯನ್ನು ರಕ್ಷಿಸಲು ಪತ್ನಿ ಮಾಡಿದ ಅಂತಿಮ ಕ್ಷಣದ ಪ್ರಯತ್ನಗಳು ಎಂತಹವರಿಗೇ ಆದರೇ ಒಂದು ಕ್ಷಣ ಕಣ್ಣೀರು ತರಿಸುತ್ತದೆ. ತನ್ನ ಪತಿ ಶರಣಾಗತಿಯಾಗುವಂತೆ ಪತ್ನಿ ದಿಲ್ಶಾದ ಪರಿಪರಿಯಾಗಿ ಬೇಡಿಕೊಂಡಿದ್ದಳು. ಶರಣಾದರೆ ಯೋಧರು ಯಾವುದೇ ರೀತಿ ಹಾನಿ ಮಾಡುವುದಿಲ್ಲ, ನಿನ್ನ ಮಗುವಿನ ಭವಿಷ್ಯಕ್ಕಾಗಿಯಾದರೂ ಶರಣಾಗು ಎಂದು ಪತ್ನಿ ಗೋಗರೆದಿದ್ದಾಳೆ. ಆದರೆ ಪತ್ನಿ ಮಾತಿಗೆ ಬೆಲೆ ಕೊಡದ ಉಗ್ರ ಯೋಧರತ್ತ ಗುಂಡು ಹಾರಿಸಿ, ಎನ್ ಕೌಂಟರ್ ನಲ್ಲಿ ಹತನಾಗಿದ್ದಾನೆ.

ಇತ್ತ ಯೋಧರ ಈ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆಗೆ ಕಾರಣವಾಗಿದ್ದು, ತಮ್ಮತ್ತ ಗುಂಡು ಹಾರಿಸುತ್ತಿದ್ದರೂ, ಉಗ್ರನನ್ನು ಒಂದೇ ಬಾರಿಗೆ ಕೊಲ್ಲದೇ  ಆತನ ಮನವೊಲಿಕೆಗೆ ಯತ್ನಿಸಿದ ಯೋಧರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.