ನನಗೆ ದಯಾಮರಣ ನೀಡಿ: ತಮಿಳುನಾಡು ಸರ್ಕಾರಕ್ಕೆ ರಾಜೀವ್ ಹಂತಕನ ಮನವಿ
26 ವರ್ಷಗಳ ಕಾಲ ಜೈಲಿನ ಕಂಬಿ ಹಿಂದೆ ಜೀವನ ಸವೆಸಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಪ್ರಕರಣದ ಅಪರಾಧಿ ಕೆ.ಪಿ ರಾಬರ್ಟ್ ಪಯಾಸ್ ತಮಿಳುನಾಡು ...

Published On :
ಚೆನ್ನೈ: 26 ವರ್ಷಗಳ ಕಾಲ ಜೈಲಿನ ಕಂಬಿ ಹಿಂದೆ ಜೀವನ ಸವೆಸಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಪ್ರಕರಣದ ಅಪರಾಧಿ ಕೆ.ಪಿ ರಾಬರ್ಟ್ ಪಯಾಸ್ ತಮಿಳುನಾಡು ಮುಖ್ಯಮಂತ್ರಿಗೆ ಪತ್ರ ಬರೆದು ದಯಾಮರಣ ಕೋರಿದ್ದಾನೆ.
ಪುಜಲ್ ಕೇಂದ್ರ ಕಾರಾಗೃಹದಲ್ಲಿರುವ 47 ವರ್ಷದ ಪಯಾಸ್ 26 ವರ್ಷ ವಯಸ್ಸಿನವನಾಗಿದ್ದಾಗ ಜೈಲು ಸೇರಿದ. 26 ವರ್ಷ ಕಾರಾಗೃಹದಲ್ಲೇ ಕಳೆದಿದ್ದಾನೆ.
2014ರಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯ ಲಲಿತಾ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆ ಮಾಡಲು ವಿಧಾನ ಸಭೆಯಲ್ಲಿ ನಿರ್ಣಯ ಪಾಸು ಮಾಡಿದ್ದರು.
ಆದರೆ ಇದಕ್ಕೆ ಕೇಂದ್ರ ಸರ್ಕಾರ ಪ್ರಬಲ ವಿರೋಧ ವ್ಯಕ್ತ ಪಡಿಸಿತ್ತು. ನನ್ನ ಇಡೀ ಜೀವನವನ್ನು ಜೈಲಿನಲ್ಲೇ ಕಳೆಯಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಆತ ಹೇಳಿದ್ದಾನೆ.
ಇತ್ತೀಚಿನ ದಿನಗಳಲ್ಲಿ ನನ್ನ ಕುಟುಂಬಸ್ಥರು ಯಾರೊಬ್ಬರು ನನ್ನನ್ನು ನೋಡಲು ಬರುತ್ತಿಲ್ಲ, ಹಾಗಾಗಿ ನನ್ನ ಜೀವನ ಮುಂದುವರಿಸುವುದು ಯಾವುದೇ ಅರ್ಥವಿಲ್ಲ, ತನಗೆ ದಯಾಮರಣ ನೀಡಬೇಕೆಂದು ರಾಬರ್ಟ್ ಮನವಿ ಮಾಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ದಯಾಮರಣTamil Nadu CMತಮಿಳುನಾಡು ಸಿಎಂmercy killingRajiv Gandhi assassinationರಾಜೀವ್ ಗಾಂಧಿ ಹತ್ಯೆKP Robert Payasಕೆ.ಪಿ ರಾಬರ್ಟ್ ಪಯಾಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


