ಪ್ರಧಾನ ಸುದ್ದಿ

ವಿಶ್ವದ 8 ಅತ್ಯಂತ ಪ್ರಬಲ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ!

ವಿಶ್ವದ 8 ಅತ್ಯಂತ ಪ್ರಬಲ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 6ನೇ ಸ್ಥಾನ ಪಡೆದಿದೆ ಎಂದು ಅಮೆರಿಕದ ಖ್ಯಾತ ವಿದೇಶಾಂಗ ನೀತಿ ಮ್ಯಾಗಜಿನ್ ಹೇಳಿದೆ.

ವಿಶ್ವದ 8 ಅತ್ಯಂತ ಪ್ರಬಲ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ!
ಸಂಗ್ರಹ ಚಿತ್ರ
Published On :

ವಾಷಿಂಗ್ಟನ್: ವಿಶ್ವದ 8 ಅತ್ಯಂತ ಪ್ರಬಲ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 6ನೇ ಸ್ಥಾನ ಪಡೆದಿದೆ ಎಂದು ಅಮೆರಿಕದ ಖ್ಯಾತ ವಿದೇಶಾಂಗ ನೀತಿ ಮ್ಯಾಗಜಿನ್ ಹೇಳಿದೆ.

ಅಮೆರಿಕದ "ದಿ ಅಮೆರಿಕನ್ ಇಂಟರೆಸ್ಟ್" ಮ್ಯಾಗಜಿನ್ ಬಿಡುಗಡೆ ಮಾಡಿರುವ ವಿಶ್ವದ 8 ಅತ್ಯಂತ ಪ್ರಬಲ ರಾಷ್ಟ್ರಗಳ ಪಟ್ಟಿ-2017ರಲ್ಲಿ ಭಾರತ 6ನೇ ಸ್ಥಾನ ಪಡೆದಿದ್ದು, ಅಮೆರಿಕ ಮೊದಲ ಸ್ಥಾನದಲ್ಲಿದೆ. ಇನ್ನು ಚೀನಾ ಮತ್ತು ಜಪಾನ್  ದೇಶಗಳು ಜಂಟಿ ಎರಡನೇ ಸ್ಥಾನದಲ್ಲಿದ್ದು, ರಷ್ಯಾ ನಾಲ್ಕು ಹಾಗೂ ಜರ್ಮನಿ ಐದನೇ ಸ್ಥಾನದಲ್ಲಿದೆ. ಆರನೇ ಸ್ಥಾನದಲ್ಲಿ ಭಾರತ ದೇಶವಿದ್ದು, ಏಳು ಮತ್ತು ಎಂಟನೇ ಸ್ಥಾನದಲ್ಲಿ ಇರಾನ್ ಮತ್ತು ಇಸ್ರೇಲ್ ದೇಶಗಳಿವೆ.

ಇನ್ನು ಜಪಾನ್ ನಂತೆಯೇ ಭಾರತವನ್ನು ವಿಶ್ವದ ಪ್ರಬಲ ಶಕ್ತಿಗಳ ಪಟ್ಟಿಯಲ್ಲಿ ಆಗಾಗ್ಗೇ ಕಡೆಗಣಿಸಲಾಗುತ್ತದೆ. ಆದರೆ ಭಾರತ ಅಪರೂಪದ ಹಾಗೂ ಅಪೇಕ್ಷಣೀಯ ಸ್ಥಾನವನ್ನು ಜಾಗತಿಕ ಮಟ್ಟದಲ್ಲಿ ಪಡೆದುಕೊಂಡಿದೆ ಎಂದು  ಮ್ಯಾಗಜಿನ್ ಹೇಳಿದೆ.

ಭಾರತ ವಿಶ್ವದ ಅತೀ ದೊಡ್ಡ ಪ್ರಜಾಪ್ರಭತ್ವ ರಾಷ್ಟ್ರವಾಗಿದ್ದು, ವಿಶ್ವದಲ್ಲೇ ಇಂಗ್ಲೀಷ್ ಮಾತನಾಡುವ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರವಾಗಿದೆ. ಭಾರತ ತುಂಬಾ ವಿಸ್ತಾರವಾದ ಮತ್ತು ವೇಗವಾಗಿ  ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿದೆ. ಏಷ್ಯಾದಲ್ಲೇ ಭಾರತ ಅತೀದೊಡ್ಡ ಮಾರುಕಟ್ಟೆ ಕೇಂದ್ರಿತ ದೇಶವಾಗಿದ್ದು, ಇದೇ ಕಾರಣಕ್ಕೆ ಚೀನಾ, ಜಪಾನ್ ಮತ್ತು ಅಮೆರಿಕ ಸೇರಿದಂತೆ ವಿವಿಧ ದೇಶಗಳು ಭಾರತದೊಂದಿಗಿನ  ವಹಿವಾಟು ಒಪ್ಪಂದ ಮಾಡಿಕೊಳ್ಳಲು ಸದಾ ಮುಂದಿರುತ್ತವೆ. ಇದೇ ಕಾರಣಕ್ಕೆ ಈ ಹಿಂದೆ ರಷ್ಟಾ ಮತ್ತು ಯೂರೋಪಿಯನ್ ದೇಶಗಳು ಕೂಡ ಭಾರತದೊಂದಿಗೆ ಹಲವು ರಕ್ಷಣಾ ಒಪ್ಪಂದಗಳು ಮಾಡಿಕೊಂಡಿವೆ ಎಂದು ಮ್ಯಾಗಜಿನ್  ಅಭಿಪ್ರಾಯಪಟ್ಟಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.