ಪ್ರಧಾನ ಸುದ್ದಿ

ಪೇದೆಗಳ ಮೇಲೆ ಹಲ್ಲೆ ಪ್ರಕರಣ: ಶಾಸಕ ಕಾಶಪ್ಪನವರ್ ಅರ್ಜಿ ವಜಾ

ತಮ್ಮ ವಿರುದ್ಧದ ಪೊಲೀಸ್ ಪೇದೆಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣ ರದ್ದು ಕೋರಿ ಶಾಸಕ ವಿಜಾಯಾನಂದ ಕಾಶಪ್ಪನವರ್...

ಪೇದೆಗಳ ಮೇಲೆ ಹಲ್ಲೆ ಪ್ರಕರಣ: ಶಾಸಕ ಕಾಶಪ್ಪನವರ್ ಅರ್ಜಿ ವಜಾ
ವಿಜಯಾನಂದ್ ಕಾಶೆಪ್ಪನವರ್
Published On :
ಬೆಂಗಳೂರು: ತಮ್ಮ ವಿರುದ್ಧದ ಪೊಲೀಸ್ ಪೇದೆಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣ ರದ್ದು ಕೋರಿ ಶಾಸಕ ವಿಜಾಯಾನಂದ ಕಾಶಪ್ಪನವರ್​ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಪ್ರಕರಣ ರದ್ದು ಕೋರಿ ಕಾಶಪ್ಪನವರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಇಂದು ವಜಾಗೊಳಿಸಿದ್ದು, ಶಾಸಕರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
2014ರ ಜುಲೈ 1 ರ ರಾತ್ರಿ ಯುಬಿ ಸಿಟಿಯ ಸ್ಕೈಬಾರ್​ನಲ್ಲಿ ಕುಟುಂಬ ಸಮೇತ ಪಾರ್ಟಿ ಮಾಡಿದ್ದ ಶಾಸಕ ಕಾಶಪ್ಪನವರ್ ಗಲಾಟೆ ನಡೆಸಿದ್ದರು. ರಾತ್ರಿ 1 ಗಂಟೆಯ ನಂತರವೂ ಬಾರ್​ನಲ್ಲಿ ಶಾಸಕ ಮತ್ತವರ ಬೆಂಬಲಿಗರು ಅವಧಿ ಮೀರಿದ ನಂತರವೂ ಕುಳಿತಿದ್ದರು. ಅವಧಿ ಮೀರಿದ ನಂತರ ಹೋಟೆಲ್​ ತೆರೆದಿದ್ದನ್ನು ನೋಡಿ ಕಬ್ಬನ್​​ ಪಾರ್ಕ್​​​ ಠಾಣೆ ಪೇದೆಗಳಾದ ಕಿರಣ್​​ ಹಾಗೂ ಪ್ರಶಾಂತ ನಾಯ್ಕ್​​​ ಪ್ರಶ್ನಿಸಿದ್ದರು. ಇದರಿಂದ ಆಕ್ರೋಶಗೊಂಡ ಶಾಸಕ ಹಾಗೂ ಅವರ ಬೆಂಬಲಿಗರು ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಸಿ, ಬೂಟ್​​ ತೋರಿಸಿ ಹಲ್ಲೆ ನಡೆಸಿದ್ದರು.
ಅಧಿಕಾರ ಗತ್ತು ತೋರಿಸಿ, ರೌಡಿಶೀಟರ್​ನಿಂದ ಪೊಲೀಸರಿಗೆ ಹಲ್ಲೆ ನಡೆಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. 
ಪ್ರಕರಣದ ವಿಚಾರಣೆ ನಡೆಸುತ್ತಿರುವ ೧ನೇ ಎಸಿಎಂಎಂ ನ್ಯಾಯಾಲಯ ಕಳೆದ ತಿಂಗಳು ವಿಚಾರಣೆಗೆ ಹಾಜರಾಗುವಂತೆ ಕಾಶಪ್ಪನವರ್‌ಗೆ ವಾರಂಟ್ ಜಾರಿಗೊಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.