ಕಣ್ಣೂರು ಕೊಲೆ ಪ್ರಕರಣ: ಆರು ಸಿಪಿಎಂ ಬೆಂಬಲಿಗರ ಬಂಧನ
ಸಿಪಿಎಂ ಕೈವಾಡ ಇಲ್ಲ ಎಂಬ ಪಕ್ಷದ ವಾದಕ್ಕೆ ವಿರುದ್ಧವಾಗಿ ಕಣ್ಣೂರು ಪೊಲೀಸರು, ಬುಧವಾರ ರಾತ್ರಿ ನಡೆದ ಬಿಜೆಪಿ ಕಾರ್ಯಕರ್ತ ಸಂತೋಷ್ ಅವರ ಕೊಲೆ ಆರೋಪದಲ್ಲಿ ಆರು ಸಿಪಿಎಂ ಕಾರ್ಯಕರ್ತರನ್ನು

Published On :
ಕಣ್ಣೂರು: ಸಿಪಿಎಂ ಕೈವಾಡ ಇಲ್ಲ ಎಂಬ ಪಕ್ಷದ ವಾದಕ್ಕೆ ವಿರುದ್ಧವಾಗಿ ಕಣ್ಣೂರು ಪೊಲೀಸರು, ಬುಧವಾರ ರಾತ್ರಿ ನಡೆದ ಬಿಜೆಪಿ ಕಾರ್ಯಕರ್ತ ಸಂತೋಷ್ ಅವರ ಕೊಲೆ ಆರೋಪದಲ್ಲಿ ಆರು ಸಿಪಿಎಂ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಬಿಜೆಪಿ ಪಕ್ಷ ಈ ಕೊಲೆಯನ್ನು ವಿರೋಧಿಸಿ ಧರಣಿ ನಡೆಸಿದ್ದು, ಈ ದಾಳಿಯ ಹಿಂದೆ ಸಿಪಿಎಂ ಕೈವಾಡ ಇದೆ ಎಂದು ಆರೋಪಿಸಿತ್ತು ಆದರೆ ಸಿಪಿಎಂ ಮುಖಂಡರು ಇದನ್ನು ನಿರಾಕರಿಸಿದ್ದರು.
ಈಗ ಸಿಪಿಎಂ ಕಾರ್ಯಕರ್ತರನ್ನು ಬಂಧಿಸಿರುವುದು, ಇದು ರಾಜಕೀಯ ದ್ವೇಷಪೂರಿತ ಕೊಲೆ ಇರಬಹುದೇ ಎಂಬ ಸಂದೇಹಗಳನ್ನು ಹುಟ್ಟಿಸಿದೆ.
ಕಳೆದ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸಂತೋಷ್ ಸ್ಪರ್ಧಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


