ಪ್ರಧಾನ ಸುದ್ದಿ

'ಸೈಕಲ್' ಚಿಹ್ನೆ ದೊರಕದಿದ್ದರೆ, ಲೋಕ ದಳ ಪಕ್ಷವನ್ನು ಮುಲಾಯಂ ಮುನ್ನಡೆಸುವ ಸಾಧ್ಯತೆ

ಸಮಾಜವಾದಿ ವಿರೋಧಿ ಬಣಗಳು 'ಸೈಕಲ್' ಚಿಹ್ನೆಗಾಗಿ ದ್ಯಾವೆ ಹೂಡಿರುವ ಹಿನ್ನಲೆಯಲ್ಲಿ, ಚುನಾವಣಾ ಆಯೋಗ ತನ್ನ ತೀರ್ಪನ್ನು ಕಾಯ್ದಿರಿಸಿದ್ದು, ಎರಡೂ ಬಣಗಳು ತಮಗೆ ಹಿನ್ನಡೆಯಾಗುವ ತೀರ್ಪಿಗೆ

'ಸೈಕಲ್' ಚಿಹ್ನೆ ದೊರಕದಿದ್ದರೆ, ಲೋಕ ದಳ ಪಕ್ಷವನ್ನು ಮುಲಾಯಂ ಮುನ್ನಡೆಸುವ ಸಾಧ್ಯತೆ
ಮುಲಾಯಂ ಸಿಂಗ್ ಯಾದವ್
Published On :
ಲಖನೌ: ಸಮಾಜವಾದಿ ವಿರೋಧಿ ಬಣಗಳು 'ಸೈಕಲ್' ಚಿಹ್ನೆಗಾಗಿ ದ್ಯಾವೆ ಹೂಡಿರುವ ಹಿನ್ನಲೆಯಲ್ಲಿ, ಚುನಾವಣಾ ಆಯೋಗ ತನ್ನ ತೀರ್ಪನ್ನು ಕಾಯ್ದಿರಿಸಿದ್ದು, ಎರಡೂ ಬಣಗಳು ತಮಗೆ ಹಿನ್ನಡೆಯಾಗುವ ತೀರ್ಪಿಗೆ ಸಿದ್ಧವಾಗುತ್ತಿವೆ.
ಗರಿಷ್ಠ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರ ಬೆಂಬಲ ಇದೆ ಎಂದು ಹೇಳಿಕೊಂಡಿರುವ ಅಖಿಲೇಶ್ ಬಣ, ಚಿಹ್ನೆ ತಪ್ಪಿ ಹೋದರೆ ಸಮಾಜವಾದಿ ಜನತಾ ಪಕ್ಷದ ಅಡಿ ಚುನಾವಣಾ ಸೆಣಸಲು ನಿರ್ಧರಿಸಿದ್ದರೆ, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಸಂಸ್ಥಾಪಿಸಿದ, ಈಗ ಡಾ ಸುನಿಲ್ ಸಿಂಗ್ ಮುನ್ನಡೆಸುತ್ತಿರುವ ಲೋಕದಳ ಪಕ್ಷದ ಅಡಿಯಲ್ಲಿ ಸ್ಪರ್ಧಿಸಲು ಮುಲಾಯಂ ಬಣ ಚಿಂತಿಸುತ್ತಿದೆ. ಲೋಕದಳ ಪಕ್ಷದ ಅಧ್ಯಕ್ಷ ಸ್ಥಾನವನ್ನು ಕೂಡ ನೀಡಲು ಸುನಿಲ್ ಸಿಂಗ್ ಮುಂದೆ ಬಂದಿದ್ದಾರೆ. 
"ನನ್ನ ಪಕ್ಷದ (ಲೋಕ ದಳ) ಅಧ್ಯಕ್ಷ ಸ್ಥಾನ ಮತ್ತು ಚಿಹ್ನೆಯನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಅವರಿಗೆ ನೀಡಿ ಅವರ ಅಡಿ ಉತ್ತರ ಪ್ರದೇಶ ಚುನಾವಣೆಗಳಲ್ಲಿ ಸ್ಪರ್ಧಿಸಲು ನಾನು ಸಿದ್ಧನಿದ್ದೇನೆ" ಎಂದು ಭಾನುವಾರ ವರದಿಗಾಗರಿಗೆ ಸುನಿಲ್ ಸಿಂಗ್ ಹೇಳಿದ್ದಾರೆ. 
ಚುನಾವಣಾ ಆಯೋಗದ ದಾಖಲೆಗಳಲ್ಲಿ ಅನಧಿಕೃತ ರಾಯಕೀಯ ಪಕ್ಷಗಳಡಿ ಲೋಕ ದಳ ನೊಂದಾವಣೆಯಾಗಿದೆ ಎಂದು ತಿಳಿಸಿರುವ ಅವರು ಮಾಜಿ ಪ್ರಧಾನಿ ಮತ್ತು ರೈತ ನಾಯಕ ಚರಣ್ ಸಿಂಗ್ ೧೯೮೦ ರಲ್ಲಿ ಪಕ್ಷವನ್ನು ಸಂಸ್ಥಾಪನೆ ಮಾಡಿದ್ದರು "ನೇತಾಜಿ (ಮುಲಾಯಂ) ಸಹ ಸಂಸ್ಥಾಪಗಳಲ್ಲಿ ಒಬ್ಬರಾಗಿದ್ದರು" ಎಂದು ಕೂಡ ಅವರು ಹೇಳಿದ್ದಾರೆ. 
ಸಮಾಜವಾದಿ ಪಕ್ಷದಿಂದ ಉಚ್ಛಾಟಿತರಾಗಿರುವ ರಾಮ್ ಗೋಪಾಲ್ ಯಾದವ್ ಅವರ ವಿರುದ್ಧ ಆರೋಪ ಮಾಡಿರುವ ಸುನಿಲ್ ಸಿಂಗ್, ಪಕ್ಷದ ಹಿತಾಸಕ್ತಿಗಳ ವಿರುದ್ಧ ಅವರು ಕೆಲಸ ಮಾಡುತ್ತಿದ್ದಾರೆ. ರಾಮ ಗೋಪಾಲ್ ಸಿಬಿಐ ನಿಂದ, ಯಾದವ್ ಸಿಂಗ್ ಪ್ರಕರಣದಲ್ಲಿ ತಮ್ಮ ಪುತ್ರ ಮತ್ತು ಸೊಸೆ ಅವರನ್ನು ರಕ್ಷಿಸಿಕೊಳ್ಳಲು ಪಕ್ಷದ ವಿರುದ್ಧ ಈ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅಖಿಲೇಶ್ ಅರ್ಥ ಮಾಡಿಕೊಳ್ಳಬೇಕು. "ಆದರೆ ಅವರ (ಅಖಿಲೇಶ್) ತಂದೆ ನೇತಾಜಿ ಪಕ್ಷಕ್ಕೆ ಒಳ್ಳೆಯದನ್ನೇ ಹರಸುವವರು" ಎಂದು ಕೂಡ ಹೇಳಿದ್ದಾರೆ. 
"ತಂದೆ ಮತ್ತು ಪುತ್ರನ ನಡುವೆ ವಿವಾದ ಬಗೆಹರಿಯಬೇಕೆಂಬುದು ನನ್ನ ಆಸೆ. ಆದರೆ ಚುನಾವಣಾ ಆಯೋಗ 'ಸೈಕಲ್' ಚಿಹ್ನೆಯನ್ನು ಎರಡೂ ಬಣಕ್ಕೆ ಕೊಡದೆ ಹೋದರೆ, ಅಥವಾ ಚಿಹ್ನೆ ಅಖಿಲೇಶ್ ಬಣಕ್ಕೆ ಹೋದರೆ, ಲೋಕದಳ, ನೇತಾಜಿಯವರ ಜೊತೆಗೆ ನಿಲ್ಲುತ್ತದೆ" ಎಂದಿರುವ ಸುನಿಲ್ ಸಿಂಗ್ ಈ ವಿಷಯ ಚರ್ಚಿಸಿ ಮನವರಿಕೆ ಮಾಡಲು ಮುಲಾಯಂ ಅವರನ್ನು ಭೇಟಿ ಮಾಡಿರುವುದಾಗಿ ಹೇಳಿದ್ದಾರೆ. 
ಮುಂದಿನ ಎರಡು ದಿನಗಳಲ್ಲಿ ಚುನಾವಣಾ ಆಯೋಗ ಚಿಹ್ನೆಯ ಬಗ್ಗೆ ತೀರ್ಪು ನೀಡುವ ಸಾಧ್ಯತೆ ಇದೆ. ಹೊಲ ಉಳುವ ರೈತನ ಚಿಹ್ನೆ ಹೊಂದಿರುವ ಲೋಕದಳ, ಉತ್ತರ ಪ್ರದೇಶ ಚುನಾವಣೆಗಳಿಗೆ ಈಗಾಗಲೇ ೧೦೦ ಅಭ್ಯರ್ಥಿಗಳನ್ನು ಘೋಷಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.