ಪ್ರಧಾನ ಸುದ್ದಿ

ಮೋದಿ ಮೇಲೆ ಮತ್ತೆ ಮನಮೋಹನ್ ಟೀಕಾಸ್ತ್ರ; 'ದುಷ್ಪರಿಣಾಮ ಇನ್ನು ಬಾಕಿಯಿದೆ'

ಪ್ರಧಾನಿ ನರೇಂದ್ರ ಮೋದಿ ಅವರ ನೋಟು ಹಿಂಪಡೆತ ನಿರ್ಧಾರದ ಮೇಲೆ ಮತ್ತೆ ವಾಗ್ದಾಳಿ ನಡೆಸಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಆರ್ಥಿಕ ವ್ಯವಸ್ಥೆ ಈಗಾಗಲೇ ಕೆಟ್ಟ ಪರಿಣಾಮ

ಮೋದಿ ಮೇಲೆ ಮತ್ತೆ ಮನಮೋಹನ್ ಟೀಕಾಸ್ತ್ರ; 'ದುಷ್ಪರಿಣಾಮ ಇನ್ನು ಬಾಕಿಯಿದೆ'
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ - ಪ್ರಧಾನಿ ನರೇಂದ್ರ ಮೋದಿ
Published On :
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ಹಿಂಪಡೆತ ನಿರ್ಧಾರದ ಮೇಲೆ ಮತ್ತೆ ವಾಗ್ದಾಳಿ ನಡೆಸಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಆರ್ಥಿಕ ವ್ಯವಸ್ಥೆ ಈಗಾಗಲೇ ಕೆಟ್ಟ ಪರಿಣಾಮ ಎದುರಿಸುತ್ತಿದೆ, 'ಇನ್ನು ಹೆಚ್ಚಿನ ದುಷ್ಪರಿಣಾಮ ಬಾಕಿಯಿದೆ' ಎಂದಿದ್ದಾರೆ. 
ಕಾಂಗ್ರೆಸ್ ಆಯೋಜಿಸಿದ್ದ ಜನ ವೇದನೆ ಸಮ್ಮೇಳನದಲ್ಲಿ ಮಾತನಾಡಿದ ಮನಮೋಹನ್ ಸಿಂಗ್, ಮೋದಿ ಮಾಡುತ್ತಿರುವ ತಪ್ಪುಗಳನ್ನು ಜನರಿಗೆ ತಿಳಿಸುವುದು ನನ್ನ ಗಂಭೀರವಾದ ಕರ್ತವ್ಯ ಎಂದಿದ್ದಾರೆ. 
"ನೋಟು ಹಿಂಪಡೆತ ನಿರ್ಧಾರ ದೇಶಕ್ಕೆ ದೊಡ್ಡ ಹೊಡೆತ ನೀಡಿದೆ. ಕಳೆದ ಎರಡು ತಿಂಗಳಲ್ಲಿ ಕೆಟ್ಟ ಪರಿಣಾಮಗಳನ್ನು ದೇಶ ಎದುರಿಸಿದೆ, ಇನ್ನು ಕೆಟ್ಟದ್ದು ಬರುವುದಿದೆ" ಎಂದು ಅವರು ಹೇಳಿದ್ದಾರೆ. 
"ಅಂತ್ಯದ ಪ್ರಾರಂಭ ಈಗ ಬಂದಿದೆ" ಎದಿರುವ ಸಿಂಗ್ "ತಪ್ಪು ಅಂಕೆಸಂಖ್ಯೆಗಳನ್ನು ಮುಂದು ಮಾಡಿ ಪ್ರಚಾರ ಮಾಡುತ್ತಿರುವ ಮೋದಿ ಅವರ ಯೋಜನೆ ತಾಳ ತಪ್ಪಿದೆ" ಎಂದಿದ್ದಾರೆ. 
"ಕಳೆದ ಎರಡು ವರ್ಷಗಳಲ್ಲಿ ಭಾರತದ ರಾಷ್ಟ್ರೀಯ ವೇತನ ಹೆಚ್ಚಿದೆ ಎಂಬ ಪ್ರಚಾರ, ಸುಳ್ಳಾಗಿದೆ.. ದೇಶದ ಅಭಿವೃದ್ಧಿ ಕೆಲವೇ ತಿಂಗಳುಗಳಲ್ಲಿ ೭.೬೫ ನಿಂದ ೭% ಕುಸಿದು, ಜಿಡಿಪಿ ಕೂಡ ತೀವ್ರ ಕುಸಿತ ಕಂಡಿದೆ" ಎಂದು ಸಿಂಗ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.