ಪ್ರಧಾನ ಸುದ್ದಿ

ನಾನು ಸಚಿವನಾದ ಮೇಲೆ ರಸ್ತೆ ಅಪಘಾತಗಳು ಹೆಚ್ಚಿವೆ: ನಿತಿನ್ ಗಡ್ಕರಿ

ರಸ್ತೆ ಮತ್ತು ಹೆದ್ದಾರಿ ಸಚಿವರಾಗಿ ತಾವು ಅಧಿಕಾರ ಸ್ವೀಕರಿಸಿದ ಮೇಲೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಿವೆ ಎಂದು ತಿಳಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಈ ಸಂಖ್ಯೆಯನ್ನು ಇಳಿಸಲು ಕ್ರಮ

ನಾನು ಸಚಿವನಾದ ಮೇಲೆ ರಸ್ತೆ ಅಪಘಾತಗಳು ಹೆಚ್ಚಿವೆ: ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ
Published On :
ನವದೆಹಲಿ: ರಸ್ತೆ ಮತ್ತು ಹೆದ್ದಾರಿ ಸಚಿವರಾಗಿ ತಾವು ಅಧಿಕಾರ ಸ್ವೀಕರಿಸಿದ ಮೇಲೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಿವೆ ಎಂದು ತಿಳಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಈ ಸಂಖ್ಯೆಯನ್ನು ಇಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. 
"ನಾನು ಸಚಿವನಾದ (ರಸ್ತೆ, ಸಾರಿಗೆ ಮತ್ತು ಹೆದ್ದಾರಿ) ಮೇಲೆ, ರಸ್ತೆ ಅಪಘಾತಗಳು ಇಳಿಯುವ ಬದಲು ೪% ಹೆಚ್ಚಾಗಿವೆ" ಎಂದು ವರದಿಗಾಗರಿಗೆ ಗಡ್ಕರಿ ಹೇಳಿದ್ದಾರೆ. 
ರಸ್ತೆ ಅಪಘಾತಗಳು ತಮಗೆ ತೀವ್ರವಾದ ನೋವುಂಟು ಮಾಡಿವೆ ಎಂದಿರುವ ಸಚಿವ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ರಸ್ತೆ ಅಪಘಾತಗಳ ಸಂಖ್ಯೆಯನ್ನು ಇಳಿಸಲು ಸಹಕರಿಸಲಿವೆ ಎಂದು ಅವರು ಹೇಳಿದ್ದಾರೆ. 
ಮೋಟಾರು ವಾಹನ (ತಿದ್ದುಪಡಿ)ಕಾಯ್ದೆ, ೨೦೧೬ ರನ್ನು ಆಗಸ್ಟ್ ನಲ್ಲಿ ಲೋಕಸಭೆಯಲ್ಲಿ ಪರಿಚಯಿಸಲಾಗಿದ್ದು, ಸಂಸತ್ತಿನ ಒಪ್ಪಿಗೆಗೆ ಕಾಯುತ್ತಿದೆ. "ನಾವು ಅಪಘಾತಗಳನ್ನು ತಗ್ಗಿಸಲು ಬಹಳಷ್ಟು ಪ್ರಯತ್ನಿಸಿದೆವು. ಆದರೆ ಕೆಲವು ಸಂಗತಿಗಳು ನಮ್ಮ ನಿಯಂತ್ರಣದಲ್ಲಿಲ್ಲ. ಮೋಟಾರ್ ವಾಹನ (ತಿದ್ದುಪಡಿ) ಕಾಯ್ದೆ ಜಂಟಿ ಆಯ್ಕೆ ಸಮಿತಿಯ ಮುಂದೆ ಹೋಗಿದೆ, (ಆದರೆ) ವರದಿ ನಮ್ಮ ಬಳಿಗೆ ಇನ್ನು ಬಂದಿಲ್ಲ" ಎಂದು ಸಚಿವರು ಹೇಳಿದ್ದಾರೆ. 
ರಸ್ತೆ ಅಪಘಾತಗಳನ್ನು ಅರ್ಧಕ್ಕೆ ಇಳಿಸುವ ಗುರಿ ಹೊಂದಿರುವುದಾಗಿ ಹೇಳಿರುವ ಗಡ್ಕರಿ, ಜನರ ಪ್ರಾಣ ಉಳಿಸುವುದು ಸರ್ಕಾರಕ್ಕೆ ಬಹಳ ಮುಖ್ಯ ಎಂದಿದ್ದಾರೆ. 
ಜಾಗತಿಕವಾಗಿ ಅತಿ ಹೆಚ್ಚು ಅಪಘಾತಗಳಾಗುವ ದೇಶಗಳಲ್ಲಿ ಭಾರತ ಕೂಡ ಒಂದು. ವಾರ್ಷಿಕವಾಗಿ ಐದು ಲಕ್ಷ ರಸ್ತೆ ಅಪಘಾತಗಳಾಗಿ, ಸುಮಾರು ೧.೫ ಲಕ್ಷ ಜನ ಮೃತಪಡುತ್ತಾರೆ. ಸುಮಾರು ೩ ಲಕ್ಷ  ಜನ ಗಾಯಗೊಳ್ಳುತ್ತಾರೆ. ೨೦೨೦ ರ ವೇಳೆಗೆ ರಸ್ತೆ ಅಪಘಾತಗಳನ್ನು ತಗ್ಗಿಸಲು ರಾಷ್ಟ್ರೀಯ ಕಾರ್ಯ ಯೋಜನೆಯನ್ನು ಸರ್ಕಾರ ಈಗಾಗಲೇ ರೂಪಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.