ಅಖಿಲೇಶ್ ಯಾದವ್ ಬೆಂಬಲಿಸಿ ೨೦೦ ಸಮಾಜವಾದಿ ಪಕ್ಷ ಶಾಸಕರ ಸಹಿ
ಉತ್ತರಪ್ರದೇಶ ಸಮಾಜವಾದಿ ಪಕ್ಷ ಹೋಳಾಗುವುದರಿಂದ ತಡೆಯುವುದಕ್ಕೆ ನಡೆದ ಮಾತುಕತೆಗಳು ವಿಫಲವಾಗುವ ಸಾಧ್ಯತೆಯಿದ್ದು, ಚುನಾವಣಾ ಆಯೋಗದ ಮುಂದೆ ಬಹುಮತ ಸಾಬೀತುಪಡಿಸಲು

Published On :
ಲಖನೌ: ಉತ್ತರಪ್ರದೇಶ ಸಮಾಜವಾದಿ ಪಕ್ಷ ಹೋಳಾಗುವುದರಿಂದ ತಡೆಯುವುದಕ್ಕೆ ನಡೆದ ಮಾತುಕತೆಗಳು ವಿಫಲವಾಗುವ ಸಾಧ್ಯತೆಯಿದ್ದು, ಚುನಾವಣಾ ಆಯೋಗದ ಮುಂದೆ ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಣ ಮತ್ತು ಅವರ ತಂದೆ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಬಣಗಳ ನಡುವೆ ಕಸರತ್ತು ಏರ್ಪಟ್ಟಿದೆ.
ಪಕ್ಷದ ಚಿಹ್ನೆ 'ಸೈಕಲ್' ಅನ್ನು ಉಳಿಸಿಕೊಳ್ಳಲು ಮುಲಾಯಂ ಮತ್ತು ಸಹೋದರ ಶಿವಪಾಲ್ ದೆಹಲಿಗೆ ತೆರಳಿದ್ದಾರೆ. ತಮ್ಮ ಅಧಿಕೃತ ಗೃಹದಲ್ಲೇ ಉಳಿದ ಅಖಿಲೇಶ್ ತಮ್ಮ ಬೆಂಬಲಿಗರ ಸಹಿ ಪಡೆದು ಅಫಿಡೆವಿಟ್ ಸಲ್ಲಿಸುವುದಕ್ಕೆ ಸನ್ನದ್ಧರಾಗಿದ್ದಾರೆ.
ಅಜಂ ಖಾನ್ ಅವರ ಮಧ್ಯಸ್ಥಿಕೆಯಿಂದ ಮುಲಾಯಂ ಅವರನ್ನು ಅಖಿಲೇಶ್ ಭೇಟಿ ಮಾಡಿದ್ದರು, ಮಾತುಕತೆಯಿಂದ ಶಾಂತಿ ಏರ್ಪಟ್ಟಿಲ್ಲ ಮತ್ತು ಮುಖ್ಯಮಂತ್ರಿ ೨೦೦ ಜನ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಬೆಂಬಲ ಪಡೆದು ಅಫಿಡವಿಟ್ ಗೆ ಸಹಿ ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ. ತಮ್ಮ ಬಣಕ್ಕೆ 'ಸೈಕಲ್' ಚಿಹ್ನೆ ದೊರೆಯುವ ಭರವಸೆ ಕೂಡ ಹೊಂದಿದ್ದಾರೆ. ಈ ಸಭೆಯಲ್ಲಿ ಹಾಜರಿದ್ದ ಸಂಪುಟ ಸಚಿವ ರವಿದಾಸ್ ಮಲ್ಹೋತ್ರ, "ನೇತಾಜಿ ತಮ್ಮ ತಂದೆ. ನಾನು ಅವರಿಗೆ (ಮುಲಾಯಂ) ಮೂರು ತಿಂಗಳವರೆಗೆ ಅಧಿಕಾರ ಹಸ್ತಾಂತರಿಸಲು ಕೋರಿದ್ದೇನೆ. ಅಧಿಕಾರಕ್ಕೆ ಬಂದ ನಂತರ ಅವರಿಗೆ ಬೇಕಾದ ನಿರ್ಧಾರ ತೆಗೆದುಕೊಳ್ಳಲಿ" ಎಂದು ಅಖಿಲೇಶ್ ಹೇಳಿದ್ದಾಗಿ ತಿಳಿಸಿದ್ದಾರೆ.
ಈ ಸಭೆಯಲ್ಲಿ ಹಾಜರಿದ್ದ ಮತ್ತೊಬ್ಬ ಶಾಸಕ ಶಂಕ್ಲಾಲ್ ಮಾಂಜಿ "ನೇತಾಜಿ ಇಲ್ಲದೆ ಸಮಾಜವಾದಿ ಪಕ್ಷ ಅಪೂರ್ಣ. ಆದರೆ ಅಖಿಲೇಶ್ ಪಕ್ಷದ ಮುಖ. ಅವರಿಲ್ಲದೆಯೂ ಪಕ್ಷ ಅಪೂರ್ಣ" ಎಂದಿದ್ದಾರೆ.
ಮುಲಾಯಂ ಸಿಂಗ್ ಕೂಡ ಶಾಸಕರ ಸಹಿ ಇರುವ ಅಫಿಡವಿಟ್ ಹೊಂದಿದ್ದಾರೆ ಎಂದು ಮುಲಾಯಂ ಬಣದ ಮೂಲಗಳು ತಿಳಿಸಿದ್ದರು, ಬೆಂಬಲಿಗರ ಸಂಖ್ಯೆಯ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.
ಕಾಳಿದಾಸ್ ಮಾರ್ಗದಲ್ಲಿರುವ ತಮ್ಮ ಗೃಹದಲ್ಲಿ ಭೇಟಿ ಮಾಡಿದ ಬೆಂಬಲಿಗರಿಗೆ ಅಖಿಲೇಶ್, ಪಕ್ಷ ಬೃಹತ್ ಜಯಗಳಿಸುವತ್ತ ಮುನ್ನಡೆಸುವ ವಿಶ್ವಾಸ ನೀಡಿದ್ದಾರೆ.
ಫೆಬ್ರವರಿ ೧೧ ರಿಂದ ಮಾರ್ಚ್ ೮ ರವರೆಗೆ ೭ ಹಂತಗಳಲ್ಲಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


