ಪ್ರಧಾನ ಸುದ್ದಿ

ಸಾರ್ವಜನಿಕ ಸ್ಥಳಗಳಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡುವಂತೆ ಅಮೆರಿಕ ತೆಲುಗು ನಿವಾಸಿಗಳಿಗೆ ಸಲಹೆ

ಅಮೆರಿಕದಲ್ಲಿರುವ ತೆಲುಗು ನಿವಾಸಿಗಳು ಸಾರ್ವಜನಿಕ ಸ್ಥಳಗಳಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡುವಂತೆ ತೆಲಂಗಾಣ....

ಸಾರ್ವಜನಿಕ ಸ್ಥಳಗಳಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡುವಂತೆ ಅಮೆರಿಕ ತೆಲುಗು ನಿವಾಸಿಗಳಿಗೆ ಸಲಹೆ
ಸಾಂದರ್ಭಿಕ ಚಿತ್ರ
Published On :
ಹೈದರಾಬಾದ್: ಅಮೆರಿಕದಲ್ಲಿರುವ ತೆಲುಗು ನಿವಾಸಿಗಳು ಸಾರ್ವಜನಿಕ ಸ್ಥಳಗಳಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡುವಂತೆ ತೆಲಂಗಾಣ ಅಮೆರಿಕನ್ ತೆಲುಗು ಸಂಘ(ಟಿಎಟಿಎ) ಸಲಹೆ ನೀಡಿದೆ.
ಕಳೆದ ಬುಧವಾರ ಅಮೆರಿಕಾದ ಕನ್ಸಾಸ್ ನ  ಒಲಾತೆ ನಗರದ ಬಾರ್ ಒಂದರಲ್ಲಿ ಆಂಧ್ರಪ್ರದೇಶ ಮೂಲದ ಎಂಜಿನಿಯರ್ ಶ್ರೀನಿವಾಸ್ ಕುಚಿಬೊಟ್ಲಾ ಎಂಬುವವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಈ ವೇಳೆ ಮತ್ತೊಬ್ಬ ಭಾರತೀಯ ಅಲೋಕ್ ಮದಸಾನಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯ ನಂತರ ಅನಿವಾಸಿ ಭಾರತೀಯರು ತೀವ್ರ ಆತಂಕಗೊಂಡಿದ್ದಾರೆ.
ನಾವು ನಮ್ಮ ಮಾತೃ ಭಾಷೆಯನ್ನು ಮಾತನಾಡಲು ಇಷ್ಟಪಡುತ್ತೇವೆ. ಆದರೆ ಕೆಲವು ಸಂದರ್ಭದಲ್ಲಿ ಅದು ನಮಗೆ ಅಪಾಯ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಾದ್ಯವಾದಷ್ಟು ಸಾರ್ವಜನಿಕ ಸ್ಥಳಗಳಲ್ಲಿ ತೆಲುಗು ಮಾತನಾಡುವದನ್ನು ತಪ್ಪಿಸಿ ಎಂದು ಟಿಎಟಿಎ ತನ್ನ ಫೇಸ್ ಬುಕ್ ಪೇಜ್ ಮೂಲಕ ಮನವಿ ಮಾಡಿದೆ.
ನಿರ್ಜನ ಪ್ರದೇಶಗಳಲ್ಲಿ ಭಾರತೀಯರನ್ನು ಟಾರ್ಗೆಟ್ ಮಾಡುವ ಸಾಧ್ಯತೆ ಇದ್ದು, ಅಂತಹ ಸ್ಥಳಗಳಿಗೆ ಒಂಟಿಯಾಗಿ ತೆರಳದಂತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇತರರೊಂದಿಗೆ ವಾಗ್ವಾದ ನಡೆಸದಂತೆ ಸಂಘ ಸಲಹೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.