ಪ್ರಧಾನ ಸುದ್ದಿ

ಜಯಲಲಿತಾ ಇಲ್ಲದೆ ಏಕಾಂಗಿಯಾಗಿದ್ದೇನೆ: ಶಶಿಕಲಾ

ತಮ್ಮ ಸುದೀರ್ಘ ಕಾಲದ ಆಪ್ತ ಗೆಳತಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಇಲ್ಲದೆ ಏಕಾಂಗಿಯಾಗಿದ್ದೇನೆ...

ಜಯಲಲಿತಾ ಇಲ್ಲದೆ ಏಕಾಂಗಿಯಾಗಿದ್ದೇನೆ: ಶಶಿಕಲಾ
ಶಶಿಕಲಾ - ಜಯಲಲಿತಾ
Published On :
ಚೆನ್ನೈ: ತಮ್ಮ ಸುದೀರ್ಘ ಕಾಲದ ಆಪ್ತ ಗೆಳತಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಇಲ್ಲದೆ ಏಕಾಂಗಿಯಾಗಿದ್ದೇನೆ ಎಂದು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರು ಗುರುವಾರ ಹೇಳಿದ್ದಾರೆ.
ಇಂದು ಜಯಲಲಿತಾ ಅವರ 69ನೇ ಜನ್ಮದಿನದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಸಂದೇಶ ನೀಡಿರುವ ಶಶಿಕಲಾ ಅವರು, ನಿರಂತರ ಸಾರ್ವಜನಿಕರ ಸೇವೆ ಮಾಡುವ ಮೂಲಕ ಜಯಲಲಿತಾ ಅವರ ಗೌರವ ಎತ್ತಿಹಿಡಿಯುವಂತೆ ಕರೆ ನೀಡಿದ್ದಾರೆ.
ಜಯಲಲಿತಾ ಅವರ ಹುಟ್ಟುಹಬ್ಬವನ್ನು ಪ್ರತಿವರ್ಷ ಅತ್ಯಂತ ಉತ್ಸಾಹದಿಂದ ಆಚರಿಸುತ್ತಿದ್ದೆವು. ಆದರೆ ಈ ವರ್ಷ ಈ ರೀತಿ(ಜೈಲಿನಿಂದ)ಯಾಗಿ ಆಚರಿಸಬೇಕಾಗುತ್ತದೆ ಅಂತ ನಾನು ಭಾವಿಸಿರಲಿಲ್ಲ ಎಂದು ಶಶಕಲಾ ಹೇಳಿದ್ದಾರೆ.
ಅಮ್ಮ ಇಂದು ನಮ್ಮೊಂದಿಗೆ ಇಲ್ಲದೆ ಇರುವುದು ತುಂಬಾ ದುಃಖ ತರಿಸುತ್ತಿದೆ. ಕಳೆದ 33 ವರ್ಷಗಳಿಂದ ಅವರ ಹುಟ್ಟುಹಬ್ಬ ಆಚರಿಸುತ್ತಿದ್ದೆ. ಆದರೆ ಈ ವರ್ಷ ಅವರಿಲ್ಲದೆ ಒಂಟಿತನ ಕಾಡುತ್ತಿದೆ ಎಂದಿದ್ದಾರೆ.
ಇದೇ ವೇಳೆ ಎಂ.ಜಿ.ರಾಮಚಂದ್ರನ್ ಅವರ ನಿಧನದ ನಂತರ ಜಯಲಲಿತಾ ಅವರು ಪಕ್ಷವನ್ನು ಮತ್ತೆ ಒಗ್ಗೂಡಿಸಿದನ್ನು ನೆನಪಿಸಿಕೊಂಡ ಶಶಿಕಲಾ, ಅಮ್ಮ ಪ್ರೀತಿ, ಸಹಾನುಭೂತಿಯುಳ್ಳ ಶ್ರಮ ಜೀವಿಯಾಗಿದ್ದರು ಎಂದು ಶಶಿಕಲಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.