ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಕುಟುಂಬದ ಉಚ್ಛಾಟನೆ!
ಶಶಿಕಲಾ ಬಣ ಪನ್ನೀರ್ ಸೆಲ್ವಂ ಮತ್ತು ಅವರ ಬೆಂಬಲಿತ ಸಂಸದ, ಶಾಸಕರನ್ನು ಉಚ್ಛಾಟಿಸಿದ ಬೆನ್ನಲ್ಲೇ ಪನ್ನೀರ್ ಸೆಲ್ವಂ ಬಣ ಕೂಡ ಇದೀಗ ಶಶಿಕಲಾ ಮತ್ತು ಅವರ ಕುಟುಂಬವನ್ನು ಎಐಎಡಿಎಂಕೆ ಪಕ್ಷದಿಂದ ಉಚ್ಛಾಟನೆ ಮಾಡಿದೆ.

ಚೆನ್ನೈ: ಎಐಎಡಿಎಂಕೆ ಪಕ್ಷದಲ್ಲಿ ಭಿನ್ನಮತ ಸ್ಫೋಟ ಮುಂದುವರೆದಿರುವಂತೆಯೇ ಇತ್ತ ಉಚ್ಛಾಟನಾ ಪರ್ವ ಕೂಡ ಮುಂದುವರೆದಿದೆ. ಈ ಹಿಂದೆ ಶಶಿಕಲಾ ಬಣ ಪನ್ನೀರ್ ಸೆಲ್ವಂ ಮತ್ತು ಅವರ ಬೆಂಬಲಿತ ಸಂಸದ, ಶಾಸಕರನ್ನು ಉಚ್ಛಾಟಿಸಿದ ಬೆನ್ನಲ್ಲೇ ಪನ್ನೀರ್ ಸೆಲ್ವಂ ಬಣ ಕೂಡ ಇದೀಗ ಶಶಿಕಲಾ ಮತ್ತು ಅವರ ಕುಟುಂಬವನ್ನು ಎಐಎಡಿಎಂಕೆ ಪಕ್ಷದಿಂದ ಉಚ್ಛಾಟನೆ ಮಾಡಿದೆ.
ಎಐಎಡಿಎಂಕೆ ಪಕ್ಷದ ಹಿರಿಯ ಮುಖಂಡ ಹಾಗೂ ಇತ್ತೀಚೆಗಷ್ಟೇ ಪನ್ನೀರ್ ಸೆಲ್ವಂ ಬಣದಿಂದ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ಇ ಮಧುಸೂಧನ್ ಅವರು ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಶಶಿಕಲಾ ಮತ್ತು ಅವರ ಕುಟುಂಬಸ್ಥರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಶಶಿಕಲಾ ಮತ್ತು ಅವರ ಸಹೋದರರಾದ ಟಿಟಿವಿ ದಿನಕರನ್ ಮತ್ತು ವೆಂಕಟೇಶನ್ ಅವರ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಅನೂರ್ಜಿತಗೊಳಿಸುವ ಮೂಲಕ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.
ಶಶಿಕಲಾ ಅವರ ಸಹೋದರ ಸಂಬಂಧಿ ಕೂಡ ಆಗಿರುವ ಟಿಟಿವಿ ದಿನಕರನ್ ಇತ್ತೀಚೆಗಷ್ಟೇ ಎಐಎಡಿಎಂಕೆ ಪಕ್ಷ ಉಪ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಈ ನೇಮಕವೇ ಕಾನೂನು ಬಾಹಿರ ಎಂದು ಆರೋಪಿಸಿರುವ ಇ ಮಧುಸೂಧನ್ ಅವರು, ಕನಿಷ್ಟ ಐದು ವರ್ಷಗಳ ಕಾಲ ಪಕ್ಷದ ಸದಸ್ಯತ್ವ ಹೊಂದಿರುವ ಮತ್ತು ಪಕ್ಷಕ್ಕಾಗಿ ದುಡಿದಿರುವ ವ್ಯಕ್ತಿಗೆ ಮಾತ್ರ ಈ ಹುದ್ದೆಯನ್ನು ನೀಡಬಹುದು. ಆದರೆ ದಿನಕರನ್ ಗೆ ಆ ಅರ್ಹತೆ ಇಲ್ಲ. ಹೀಗಾಗಿ ಅವರ ನೇಮಕ ಅಸಿಂಧು ಎಂದು ಹೇಳಿದ್ದಾರೆ.
ಪನ್ನೀರ್ ಬಣದಿಂದ ಪಳನಿ ಸ್ವಾಮಿ ವಿರುದ್ಧ ಮತ ಚಲಾಯಿಸಲು ನಿರ್ಧಾರ, ರಾಜ್ಯಾದ್ಯಂತ ಪ್ರತಿಭಟನೆಗೆ ಸಿದ್ಧತೆ!
ಅಂತೆಯೇ ಪಕ್ಷದ ಶಾಸಕರ ವಿರೋಧದ ಹೊರತಾಗಿಯೂ ಅಧಿಕಾರಕ್ಕೇರಿರುವ ಪಳನಿ ಸ್ವಾಮಿ ನೇತೃತ್ವದ ನೂತನ ಸರ್ಕಾರದ ವಿರುದ್ಧ ತಾವು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಪನ್ನೀರ್ ಸೆಲ್ವಂ ಬಣದ ಶಾಸಕರು ಘೋಷಿಸಿದ್ದಾರೆ. ಅಂತೆಯೇ ನಾಳೆ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಪಳನಿ ಸ್ವಾಮಿ ವಿರುದ್ಧ ಮತ ಚಲಾಯಿಸುವ ಮೂಲಕ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿಯೂ ಪನ್ನೀರ್ ಸೆಲ್ವಂ ಬಣ ಘೋಷಣೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


