ಪ್ರಧಾನ ಸುದ್ದಿ

ಪನ್ನೀರ್ ಸೆಲ್ವಂ ಪಡೆ ಸೇರಿದ ಮತ್ತೆ ಐವರು ಸಂಸದರು, ಬೆಂಬಲಿಗ ಸಂಸದರ ಸಂಖ್ಯೆ 10ಕ್ಕೆ ಏರಿಕೆ

ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ವಿಕೆ ಶಶಿಕಲಾಗೆ ಅಡ್ಡಿಯಾಗಿರುವ ಹಂಗಾಮಿ ಮುಖ್ಯಮಂತ್ರಿ ಓ. ಪನ್ನೀರ್...

ಪನ್ನೀರ್ ಸೆಲ್ವಂ ಪಡೆ ಸೇರಿದ ಮತ್ತೆ ಐವರು ಸಂಸದರು, ಬೆಂಬಲಿಗ ಸಂಸದರ ಸಂಖ್ಯೆ 10ಕ್ಕೆ ಏರಿಕೆ
ಓ ಪನ್ನೀರ್ ಸೆಲ್ವಂ
Published On :
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ವಿಕೆ ಶಶಿಕಲಾಗೆ ಅಡ್ಡಿಯಾಗಿರುವ ಹಂಗಾಮಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಅವರಿಗೆ ದಿನದಿಂದ ದಿನಕ್ಕೆ ಪಕ್ಷದಲ್ಲಿ ಬೆಂಬಲ ಹೆಚ್ಚುತ್ತಿದೆ. ಅಜ್ಞಾತರಾಗಿರುವ ಶಾಸಕರ ಪೈಕಿ ಕೆಲವರು ಶಶಿಕಲಾ ಅವರಿಗೆ ಬೆಂಬಲ ಘೋಷಿಸಿದ್ದರೆ, ಸಂಸದರು ಮಾತ್ರ ಪನ್ನೀರ್ ಸೆಲ್ವಂ ಅವರಿಗೆ ಬಹಿರಂಗವಾಗಿ ಬೆಂಬಲ ಸೂಚಿಸುತ್ತಿದ್ದಾರೆ. 
ಇಂದು ಮತ್ತೆ ಐವರು ಸಂಸದರು ಪನ್ನೀರ್ ಸೆಲ್ವಂ ಅವರನ್ನು ಸೇರಿಕೊಂಡಿದ್ದು, ಇದರೊಂದಿಗೆ ಸೆಲ್ವಂಗೆ ಬೆಂಬಲ ಘೋಷಿಸಿದ ಸಂಸದರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ವೆಲ್ಲೂರು ಸಂಸದ ಸೆಂಗುಟ್ಟುವನ್ ಟುಟಿಕಾರನ್ ಸಂಸದ ಜೆ.ಜೆಯಸಿಂಗ್ ಪನ್ನೀರ್ ಸೆಲ್ವಂಗೆ ಬೆಂಬಲ ಘೋಷಿಸಿದ್ದಾರೆ. ಇನ್ನು ತಿರುವಣ್ಣಾ ಮಲೈ ಸಂಸದೆ ವನರೋಜಾ, ವೆಲ್ಲೋರ್ ಸಂಸದ ಸೆಂಗುಟ್ಟುವನ್ ಆರ್ ಪಿ. ಪೆರಂಬಲುರ್ ಸಂಸದ ಮಾರುತರಾಜ ಹಾಗೂ ವಿಲ್ಲುರುರಂ ಸಂಸದ ರಾಜೇಂದ್ರನ್ ಅವರು ಪನ್ನೀರ್ ಸೆಲ್ವಂ ಅವರನ್ನು ಭೇಟಿ ಮಾಡಿ ಬೆಂಬಲ ನೀಡಿದ್ದಾರೆ
ಇನ್ನು ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ಘೋಷಿಸಿದ ವೆಲ್ಲುಪುರಂ ಉತ್ತರ ಸಂಸದ ಲಕ್ಷ್ಮಣನ್ ಅವರನ್ನು ಪಕ್ಷದ ಜಿಲ್ಲಾ ಕಾರ್ಯದರ್ಶಿ ಹುದ್ದೆಯಿಂದ ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರು ವಜಾಗೊಳಿಸಿದ್ದಾರೆ.
ಇದು ಸಂಸದರ ಕತೆಯಾದರೆ ಶಶಿಕಲಾ ಮುಖ್ಯಮಂತ್ರಿಯಾಗಬೇಕೆಂದು ಒತ್ತಾಯಿಸುತ್ತಿದ್ದ ತಮಿಳುನಾಡು ಶಾಸಕ, ಶಾಲಾ ಶಿಕ್ಷಣ ಸಚಿವ ಕೆ ಪಾಂಡಿಯರಾಜನ್ ಸೇರಿದಂತೆ ಹಲವು ಶಾಸಕರು ಪನ್ನೀರ್ ಸೆಲ್ವಂ ಗೆ ಬೆಂಬಲ ಘೋಷಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.