ಪ್ರಧಾನ ಸುದ್ದಿ

ಸಿಂಗ್ ವಿರುದ್ಧ ಪ್ರಧಾನಿ ವಾಗ್ದಾಳಿ; ಸದನದಿಂದ ಹೊರ ನಡೆದ ಕಾಂಗ್ರೆಸ್!

ನೋಟು ನಿಷೇಧ ಸಂಬಂಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಪ್ರಧಾನಿ ಮೋದಿ ಅವರು ವಾಗ್ದಾಳಿ ನಡೆಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದರು ರಾಜ್ಯ ಸಭೆಯಿಂದ ಹೊರ ನಡೆದ ಪ್ರಸಂಗ ನಡೆದಿದೆ.

ಸಿಂಗ್ ವಿರುದ್ಧ ಪ್ರಧಾನಿ ವಾಗ್ದಾಳಿ; ಸದನದಿಂದ ಹೊರ ನಡೆದ ಕಾಂಗ್ರೆಸ್!
ಸಭಾತ್ಯಾಗದ ಬಳಿಕ ಸಂಸತ್ ಭವನದಿಂದ ಹೊರಗೆ ತೆರಳಿದ ಮಾಜಿ ಪ್ರಧಾನಿ ಸಿಂಗ್
Published On :

ನವದೆಹಲಿ: ನೋಟು ನಿಷೇಧ ಸಂಬಂಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಪ್ರಧಾನಿ ಮೋದಿ ಅವರು ವಾಗ್ದಾಳಿ ನಡೆಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದರು ರಾಜ್ಯ ಸಭೆಯಿಂದ ಹೊರ ನಡೆದ  ಪ್ರಸಂಗ ನಡೆದಿದೆ.

ಯುಪಿಎ ಅವಧಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದರೂ ಪ್ರಧಾನಿ ಸಿಂಗ್ ಮೇಲೆ ಮಾತ್ರ ಯಾವುದೇ ಕಪ್ಪು ಚುಕ್ಕೆ ಇಲ್ಲ. ಪ್ರಧಾನಿ ಸಿಂಗ್ ಗೆ ರೈನ್ ಕೋಟ್ ಹಾಕಿ ಸ್ನಾನ ಮಾಡುವ ಬಗೆ ಚೆನ್ನಾಗಿ ಗೊತ್ತು ಎಂದು ಹೇಳಿದ್ದ ಪ್ರಧಾನಿ  ಮೋದಿ ಅವರ ಹೇಳಿಕೆಗೆ ಕಾಂಗ್ರೆಸ್ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್ ಗೆ ಸಮಾಜವಾದಿ ಪಕ್ಷ ಕೂಡ ಸಾಥ್ ನೀಡುವುದರೊಂದಿಗೆ ಸಜನದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.  ಸದಸ್ಯರು ಪರಸ್ಪರ ವಾಕ್ಸಮರದಲ್ಲಿ ತೊಡಗಿದ್ದರು.

ಈ ನಡುವೆ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ಸದಸ್ಯರು ಹಾಗೂ ಸಮಾಜವಾದಿ ಪಕ್ಷದ ಸಂಸದರು  ರಾಜ್ಯಸಭೆ ಕಲಾಪದಲ್ಲಿ ಸಭಾತ್ಯಾಗ ನಡೆಸಿ ಹೊರ ನಡೆದರು.

ಈ ವೇಳೆ ಸಂಸತ್ ಆವರಣ ಹೊರಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರು, ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತಂತೆ ಪ್ರಧಾನಿ ಮೋದಿ ಸೊಕ್ಕಿನ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು. ಅಂತೆಯೇ  ಪಿ ಚಿದಂಬರಂ ಅವರು ಮಾತನಾಡಿ ಮಾಜಿ ಪ್ರಧಾನಿಗಳ ವಿರುದ್ಧ ಪ್ರಧಾನಿ ಮೋದಿ ಬಳಕೆ ಮಾಡಿದ ಕಟು ಶಬ್ದಗಳು ಅಸಮಾಧಾನ ತಂದವು. ಹೀಗಾಗಿ ನಮ್ಮ ಪ್ರತಿಭಟನಾ ರೂಪವಾಗಿ ನಾವು ಸಭಾತ್ಯಗ ಮಾಡಿದ್ದೇವೆ. ಈ ಹಿಂದೆ  ಯಾವ ಪ್ರಧಾನಿಯೂ ಕೂಡ ಮಾಜಿ ಪ್ರಧಾನಿಗಳ ವಿರುದ್ಧ ಇಂತಹ ಕಟು ಟೀಕೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ  ಹೊರಬಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಈ ಬಗ್ಗೆ ತಾವು ಪ್ರತಿಕ್ರಿಯೆ ನೀಡುವುದಿಲ್ಲ  ಎಂದು ಹೇಳಿ ಹೊರಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.