ಪ್ರಧಾನ ಸುದ್ದಿ

"ನೋಟು ನಿಷೇಧ ಕಪ್ಪುಹಣ, ಭ್ರಷ್ಟಾಚಾರದ ವಿರುದ್ಧದ ಹೋರಾಟವೇ ಹೊರತು, ರಾಜಕೀಯದ ವಿರುದ್ಧವಲ್ಲ"

ನೋಟು ನಿಷೇಧ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಹೋರಾಟವೇ ಹೊರತು ಯಾವುದೇ ಪಕ್ಷದ ಅಥವಾ ರಾಜಕೀಯದ ವಿರುದ್ಧವಲ್ಲ ಎಂದು ಪ್ರಧಾನಿ ಮೋದಿ ಬುಧವಾರ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

"ನೋಟು ನಿಷೇಧ ಕಪ್ಪುಹಣ, ಭ್ರಷ್ಟಾಚಾರದ ವಿರುದ್ಧದ ಹೋರಾಟವೇ ಹೊರತು, ರಾಜಕೀಯದ ವಿರುದ್ಧವಲ್ಲ"
ರಾಜ್ಯ ಸಭೆಯಲ್ಲಿ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
Published On :

ನವದೆಹಲಿ: ನೋಟು ನಿಷೇಧ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಹೋರಾಟವೇ ಹೊರತು ಯಾವುದೇ ಪಕ್ಷದ ಅಥವಾ ರಾಜಕೀಯದ ವಿರುದ್ಧವಲ್ಲ ಎಂದು ಪ್ರಧಾನಿ ಮೋದಿ ಬುಧವಾರ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ನೋಟು ನಿಷೇಧ ಸಂಬಂಧ ಪ್ರತಿಪಕ್ಷಗಳ ಟೀಕೆಗಳಿಗೆ ಕಟುವಾಗಿ ಉತ್ತರಿಸಿದ ಪ್ರಧಾನಿ ಮೋದಿ ನೇರವಾಗಿ ಕಾಂಗ್ರೆಸ್ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ  ಮತ್ತೊಮ್ಮೆ ತಮ್ಮ ಸರ್ಕಾರದ ನೋಟು ನಿಷೇಧದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು.

"ಭಾರತದಲ್ಲಿನ ಭ್ರಷ್ಟಾಚಾರದಿಂದಾಗಿ ದೆಶದ ಬಡವರು ಮತ್ತು ಮಧ್ಯಮ ವರ್ಗದ ಜನರು ತೊಂದರೆ ಅನುಭವಿಸುವಂತಾಗಿದೆ. ವಿತ್ತ ಸಚಿವಾಲಯದ ಉನ್ನತ ಅಧಿಕಾರಿ ಮಾಧವ್ ಗೋಡ್ಬಲೆ ಅವರು ಬರೆದಿರುವ ಪುಸ್ತಕದಲ್ಲಿ ನೋಟು  ನಿಷೇಧ ಮಾಡುವ ಕುರಿತು 1971ರಲ್ಲೇ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರಿಗೆ ವಿತ್ತ ಸಚಿವರು ಸಲಹೆ ನೀಡಿದ್ದರು. ಆದರೆ ಅಂದು ಇಂದಿರಾಗಾಂಧಿ ಅದನ್ನು ನಿರಾಕರಿಸಿದ್ದರು. ತುಂಬಾ ದಿನಗಳ ಹಿಂದೆ ವಾಂಚೂ ಸಮಿತಿ  ನೋಟು ನಿಷೇಧ ಸಂಬಂಧ ಶಿಫಾರಸ್ಸು ಮಾಡಿದ್ದರು. ಆದರೆ ಅಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಆ ಶಿಫಾರಸ್ಸನ್ನು ನಿರಾಕರಿಸಿದ್ದರು. ಬಹುಶಃ ಅವರು ಚುನಾವಣೆ ಕುರಿತಂತೆ ಚಿಂತಿಸಿರಬೇಕು.

ನಾನು ನಿಮ್ಮ ಜಾಗದಲ್ಲಿ ಇದಿದ್ದರೆ ಮಾಜಿ ಪ್ರಧಾನಿಗಳ ವಿರುದ್ಧ ಆರೋಪ ಮಾಡಿದ್ದಕ್ಕಾಗಿ ಮಾಧವ್ ಗೋಡ್ಬಲೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದ್ದೆ. ನೋಟು ನಿಷೇಧವಾದ ಬಳಿಕದ 40 ದಿನಗಳಲ್ಲಿ ಸುಮಾರು 700ಕ್ಕೂ  ಹೆಚ್ಚು ಮಾವೋ ವಾದಿಗಳು ಶರಣಾಗಿದ್ದಾರೆ. ನೋಟು ನಿಷೇಧದಿಂದ ಪ್ರಾಮಾಣಿಕರಿಗೆ ಯಾವುದೇ ತೊಂದರೆ ಇಲ್ಲ. ಆದರೆ ಅಪ್ರಮಾಣಿಕರಿಗೆ ಶಿಕ್ಷೆ ತಪ್ಪಿದ್ದಲ್ಲ. ನೋಟು ನಿಷೇಧದಿಂದ ಮಧ್ಯಮವರ್ಗದ ಮಧ್ಯಮ ಮತ್ತು ಬಡವರ  ಮೇಲೆ ಪರಿಣಾಮವಾಗಿರಬಹುದು. ಆದರೆ ಭವಿಷ್ಯದಲ್ಲಿ ಇದು ಅವರಿಗೆ ಉತ್ತಮ ಬೆಂಬಲ ನೀಡುತ್ತದೆ.

ನೋಟು ನಿಷೇಧದಿಂದ ಬ್ಯಾಂಕುಗಳಿಗೆ ಸಾಕಷ್ಟು ಪ್ರಮಾಣದ ಹಣದ ಹರಿವು ಬಂದಿದ್ದು, ಬ್ಯಾಂಕ್ ಗಳ ಸಾಲದ ಮೇಲಿನ ಬಡ್ಡಿದರ ಕೂಡ ಕಡಿತವಾಗಿದೆ. ನೀವು ಒಬ್ಬ ವಿದೇಶಿ ಆರ್ಥಿಕ ತಜ್ಞ ನೋಟು ನಿಷೇಧ ವಿರುದ್ಧ ಮಾತನಾಡಿದ್ದರೆ  ನಾನು ಹತ್ತು ಮಂದಿ ಆರ್ಥಿಕ ತಜ್ಞರು ಇಂತಹ ದಿಟ್ಟ ನಿರ್ಧಾರ ಈ ಹಿಂದೆ ಎಂದೂ ಆಗಿಲ್ಲ ಎಂದು ಬಣ್ಣಿಸಿದ ತಜ್ಞರನ್ನು ತೋರಿಸುತ್ತೇನೆ. ನೋಟು ನಿಷೇಧ ಕ್ರಮದಿಂದ ವಿಶ್ವಕ್ಕೇ ಭಾರತ ಇದೀಗ ಮಾದರಿಯಾಗಿದೆ ಎಂದು ಮೋದಿ  ಹೇಳಿದರು.

"ಸಿಂಗ್ ಗೆ ರೈನ್ ಕೋಟ್ ಹಾಕಿ ಸ್ನಾನ ಮಾಡೋದು ಗೊತ್ತು"
ಇದೇ ವೇಳೆ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ, "ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಓರ್ವ ಅಸಾಧಾರಣ ಮನುಷ್ಯ.  ಅವರು ಪ್ರಧಾನಿಯಾಗಿದ್ದಾಗ ಸಾವಿರಾರು ಕೋಟಿ ರುಪಾಯಿಗಳ ಭ್ರಷ್ಟಾಚಾರ ನಡೆದರೂ ಅವರ ವಿರುದ್ಧ ಯಾವುದೇ ಕಪ್ಪು ಚುಕ್ಕೆ ಇಲ್ಲ. ಇದು ನಿಜಕ್ಕೂ ಅಚ್ಚರಿಯ ವಿಷಯ. ಅವರಿಗೆ ರೇನ್ ಕೋಟ್ ಹಾಕಿ ಸ್ನಾನ ಮಾಡೋದು ಗೊತ್ತು  ಎಂದು ವ್ಯಂಗ್ಯವಾಡಿದರು.

ಕಳೆದ 70ವರ್ಷಗಳ ಕಾಲ ದೇಶದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸಿದೆ. ನಾನು ಕೇವಲ 2.5 ವರ್ಷ ಆಡಳಿತ ನಡೆಸಿದ್ದೇನೆ. ಹಾಗಾದರೆ ದೇಶದ ಅಭಿವೃದ್ಧಿ ಆಗಿಲ್ಲ ಅಂದರೆ ಅದಕ್ಕೆ ನಾನೊಬ್ಬನೆ ಕಾರಣನೇ ಎಂದು ಪ್ರಧಾನಿ ಮೋದಿ  ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ನೋಟು ನಿಷೇಧದ ಕ್ರಮ ಹೊಸದೇನಲ್ಲ, 1972ರಲ್ಲಿ ಜ್ಯೋತಿ ಬಸು ಕೂಡಾ ಲೋಕಸಭೆಯಲ್ಲಿ ನೋಟು ನಿಷೇಧದ ಬಗ್ಗೆ ಉಲ್ಲೇಖಿಸಿದ್ದರು. ಇಂದು ನಾವು ಏನೇ ಮಾಡಲು  ಹೊರಟರು ಕೂಡಾ ಅದನ್ನು ಲೇವಡಿ ಮಾಡಲಾಗುತ್ತಿದೆ. ಸ್ವಚ್ಚತಾ ಆಂದೋಲನಾ, ನೋಟು ನಿಷೇಧದ ಬಗ್ಗೆ ವಿಪಕ್ಷಗಳು ಕೂಗಾಡುತ್ತಿವೆ ಎಂದು ಮೋದಿ ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.