ಇಬ್ಬರು ಬ್ಯಾಂಕ್ ಸಿಬ್ಬಂದಿ 5 ಮಂದಿ ಪೊಲೀಸರ ಹತ್ಯೆಗೈದು 50 ಲಕ್ಷ ದೋಚಿದ ಉಗ್ರರು!
ಅತ್ತ ಪಾಪಿ ಪಾಕಿಸ್ತಾನದ ಸೈನಿಕರು ಇಬ್ಬರು ಭಾರತೀಯ ಯೋಧರನ್ನು ಹತ್ಯೆಗೈದಿರುವಂತೆಯೇ ಇತ್ತ ಕಾಶ್ಮೀರದ ಕುಲ್ಗಾಂನಲ್ಲಿ ಉಗ್ರರ ಗುಂಪೊಂದು ಬ್ಯಾಂಕ್ ನ ವಾಹನವೊಂದರ ಮೇಲೆ ದಾಳಿ ಮಾಡಿ ಇಬ್ಬರು ಸಿಬ್ಬಂದಿ ಹಾಗೂ 5 ಮಂದಿ ಪೊಲೀಸರನ್ನು ಕೊಂದು 50 ಲಕ್ಷ ಹಣವನ್ನು ದೋಚಿದ್ದಾರೆ.

ಶ್ರೀನಗರ: ಅತ್ತ ಪಾಪಿ ಪಾಕಿಸ್ತಾನದ ಸೈನಿಕರು ಇಬ್ಬರು ಭಾರತೀಯ ಯೋಧರನ್ನು ಹತ್ಯೆಗೈದಿರುವಂತೆಯೇ ಇತ್ತ ಕಾಶ್ಮೀರದ ಕುಲ್ಗಾಂನಲ್ಲಿ ಉಗ್ರರ ಗುಂಪೊಂದು ಬ್ಯಾಂಕ್ ನ ವಾಹನವೊಂದರ ಮೇಲೆ ದಾಳಿ ಮಾಡಿ ಇಬ್ಬರು ಸಿಬ್ಬಂದಿ ಹಾಗೂ 5 ಮಂದಿ ಪೊಲೀಸರನ್ನು ಕೊಂದು 50 ಲಕ್ಷ ಹಣವನ್ನು ದೋಚಿದ್ದಾರೆ.
ಸೋಮವಾರ ಈ ಭೀಕರ ಘಟನೆ ನಡೆದಿದ್ದು, ಕುಲ್ಗಾಂ ನಲ್ಲಿ ಬ್ಯಾಂಕ್ ಗೆ ಸಂಬಂಧಿಸಿದ ಹಣದ ವಾಹನ ಸಂಚರಿಸುತ್ತಿದ್ದಾಗ ಅದರ ಮೇಲೆ ಏಕಾಏಕಿ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ವ್ಯಾನ್ ನಲ್ಲಿ ಇಬ್ಬರು ಬ್ಯಾಂಕ್ ಸಿಬ್ಬಂದಿ ಐದು ಮಂದಿ ಪೊಲೀಸ್ ಭದ್ರತಾ ಸಿಬ್ಬಂದಿಗಳು ಇದ್ದರು. ಗುಂಡಿನ ದಾಳಿ ವೇಳೆ ಎಲ್ಲ 7 ಮಂದಿ ಸಾವನ್ನಪ್ಪಿದ್ದು, ಬಳಿಕ ಉಗ್ರರು ಹಣದ ಬಾಕ್ಸ್ ನೊಂದಿಗೆ ಪರಾರಿಯಾಗಿದ್ದಾರೆ. ಬಾಕ್ಸ್ ನಲ್ಲಿ ಸುಮಾರು 50 ಲಕ್ಷ ಹಣವಿತ್ತು ಎಂದು ತಿಳಿದುಬಂದಿದೆ.
ವ್ಯಾನ್ ಮೇಲೆ ದಾಳಿ ನಡೆಸಿದ ಉಗ್ರರು ವ್ಯಾನ್ ನಲ್ಲಿದ್ದ ಪೊಲೀಸರು ಮತ್ತು ಬ್ಯಾಂಕ್ ಸಿಬ್ಬಂದಿಗಳನ್ನು ಹೊರಗೆಳೆದು ಅವರನ್ನು ಕೊಂದು ಹಾಕಿದ್ದಾರೆ. ಬಳಿಕ ಪೊಲೀಸರ ಕೈಯಲ್ಲಿದ್ದ ಶಸ್ತ್ರಾಸ್ತ್ರ ಮತ್ತು ವ್ಯಾನ್ ನಲ್ಲಿದ್ದ ಹಣವನ್ನು ಉಗ್ರರು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪರಾರಿಯಾದ ಉಗ್ರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


