ಸುಕ್ಮಾ ದಾಳಿಕೋರರ ಸುಳಿವಿಗೆ 40 ಲಕ್ಷ ಬಹುಮಾನ ಘೋಷಣೆ!
25 ಮಂದಿ ಯೋಧರ ಸಾವಿಗೆ ಕಾರಣವಾದ ಸುಕ್ಮಾ ನಕ್ಸಲ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲರು ಸುಳಿವು ನೀಡಿದವರಿಗೆ 40 ಲಕ್ಷ ರು. ಬಹುಮಾನ ಘೋಷಣೆ ಮಾಡಲಾಗಿದೆ.

ಸುಕ್ಮಾ: 25 ಮಂದಿ ಯೋಧರ ಸಾವಿಗೆ ಕಾರಣವಾದ ಸುಕ್ಮಾ ನಕ್ಸಲ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲರು ಸುಳಿವು ನೀಡಿದವರಿಗೆ 40 ಲಕ್ಷ ರು. ಬಹುಮಾನ ಘೋಷಣೆ ಮಾಡಲಾಗಿದೆ.
ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಸಿಆರ್ ಪಿಎಫ್ ನ 74ನೇ ಬೆಟಾಲಿಯನ್ ಯೋಧರ ಮೇಲೆ ದಾಳಿ ಮಾಡಿದ್ದ ಸುಮಾರು 300 ಮಂದಿ ನಕ್ಸಲರು ಬರೊಬ್ಬರಿ 25 ಮಂದಿ ಯೋಧರನ್ನು ಹತ್ಯೆಗೈದಿದ್ದರು. ಈ ಪ್ರಕರಣ ಇಡೀ ದೇಶದ ಆಕ್ರೋಶಕ್ಕೆ ಕಾರಣವಾಗಿತ್ತು.
ಇದೀಗ ನಕ್ಸಲರ ವಿರುದ್ಧ ಕಠಿಣ ನಿಲುವು ತಳೆದಿರುವ ಕೇಂದ್ರ ಸರ್ಕಾರ ನಕ್ಸಲರ ಶತಾಯಗತಾಯ ಅವರನ್ನು ಮಟ್ಟಹಾಕಲು ನಿರ್ಧರಿಸಿದೆ. ಇದೇ ಕಾರಣಕ್ಕೆ ನಕ್ಸಲರ ಕುರಿತು ಮಾಹಿತಿ ನೀಡಿದವರಿಗೆ 40 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.
ಇದೇ ವೇಳೆ ಛತ್ತೀಸ್ ಘಡದಲ್ಲಿ ನಕ್ಸಲರ ದಾಳಿ ಮಟ್ಟಹಾಕುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಒಟ್ಟು 28 ಬೆಟಾಲಿಯನ್ ಸೇನಾ ತುಕಡಿಗಳನ್ನು ಛತ್ತೀಸ್ ಘಡದಲ್ಲಿ ನಿಯೋಜಿಸಲಾಗಿದ್ದು, ನಕ್ಸಲ್ ಚಟುವಟಿಕೆ ವ್ಯಾಪಕವಾಗಿರುವ ಬಸ್ತಾರ್ ನಲ್ಲಿಯೇ 10 ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.
ಪ್ರತೀ ಬೆಟಾಲಿಯನ್ ನಲ್ಲಿ 1 ಸಾವಿರ ಯೋಧರು ಇರಲಿದ್ದಾರೆ ಎಂದು ಸಿಆರ್ ಪಿಎಫ್ ಡಿಜಿ ಸುದೀಪ್ ಲಕ್ತಾಕಿಯಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


