ಪ್ರಧಾನ ಸುದ್ದಿ

ಬಿ ಕೆ ನೆಹರು ಅವರ ಪತ್ನಿ ಶೋಭಾ ನೆಹರು ೧೦೯ನೇ ವಯಸ್ಸಿನಲ್ಲಿ ವಿಧಿವಶ

ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ದಾಯಾದಿ ದಿವಂಗತ ಬಿ ಕೆ ನೆಹರು ಅವರ ಪತ್ನಿ ಶೋಭಾ ನೆಹರು ಅವರು ಹಿಮಾಚಲ ಪ್ರದೇಶದ ಕಸೌಲಿ ಪಟ್ಟಣದ ತಮ್ಮ ಮನೆಯಲ್ಲಿ

ಬಿ ಕೆ ನೆಹರು ಅವರ ಪತ್ನಿ ಶೋಭಾ ನೆಹರು ೧೦೯ನೇ ವಯಸ್ಸಿನಲ್ಲಿ ವಿಧಿವಶ
ಶೋಭಾ ನೆಹರು
Published On :
ಕಸೌಲಿ: ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ದಾಯಾದಿ ದಿವಂಗತ ಬಿ ಕೆ ನೆಹರು ಅವರ ಪತ್ನಿ ಶೋಭಾ ನೆಹರು ಅವರು ಹಿಮಾಚಲ ಪ್ರದೇಶದ ಕಸೌಲಿ ಪಟ್ಟಣದ ತಮ್ಮ ಮನೆಯಲ್ಲಿ ವಯೋಸಹಜವಾದ ಆರೋಗ್ಯ ತೊಂದರೆಯಿಂದ ವಿಧಿವಶರಾಗಿದ್ದಾರೆ. ಅವರಿಗೆ ೧೦೯ ವರ್ಷವಾಗಿತ್ತು. ಅವರ ಅಂತಿಮ ಸಂಸ್ಕಾರ ಕಸೌಲಿಯಲ್ಲಿ ಬುಧವಾರ ನೆರವೇರಿದೆ. 
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಧಣಿ ರಾಮ್ ಶಾಂಡಿಲ್ ಸೇರಿದಂತೆ ಹಲವು ಗಣ್ಯರು ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು. 
ಶೋಭಾ ನೆಹರು ತಮ್ಮ ಮೂವರು ಪುತ್ರರನ್ನು ತೊರೆದಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಜವಹಾರ್ ನೆಹರು ಅವರ ದಾಯಾದಿಯಾಗಿದ್ದ ಭಾರತೀಯ ರಾಯಭಾರಿ ಬಿ ಕೆ ನೆಹರು ಅವರನ್ನು ಶೋಭಾ ವರಿಸಿದ್ದರು. 
ಹಂಗರಿಯ ಬುಡಾಪೆಸ್ಟ್ ನಲ್ಲಿ ಜನಿಸಿದ್ದ ಮ್ಯಾಗ್ಡಾಲ್ನ ಫ್ರೀಡ್ ಮ್ಯಾನ್ ೧೯೩೫ ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಬಿ ಕೆ ನೆಹರು ಅವರನ್ನು ಭೇಟಿ ಮಾಡಿದ ನಂತರ ನೆಹರು ಕುಟುಂಬಕ್ಕೆ ಸೊಸೆಯಾಗಿ ಬಂದಿದ್ದರು. ಮದುವೆಯ ನಂತರ ಶೋಭಾ ಎಂದು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದರು. 
ಸ್ವಾತಂತ್ರ್ಯ ಭಾರತದ ಪ್ರಬಲ ಅಧಿಕಾರಿಗಳಲ್ಲಿ ಒಬ್ಬಾರಾಗಿದ್ದ ಬಿ ಕೆ ನೆಹರು ತಮ್ಮ ೯೨ನೆ ವಯಸ್ಸಿನಲ್ಲಿ ಅಕ್ಟೋಬರ್ ೩೧, ೨೦೦೧ರಲ್ಲಿ ಮೃತರಾಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.